ಜಗಳ: ಗಂಡನ ಶವ ಕೆರೆಯಲ್ಲಿ ಪತ್ತೆ ಕೊಲೆ ಶಂಕೆ!

| Published : Mar 20 2024, 01:20 AM IST / Updated: Mar 20 2024, 05:04 PM IST

murder 0

ಸಾರಾಂಶ

ನವ ವಿವಾಹಿತನೊಬ್ಬನ ಮೃತದೇಹ ತಾಲೂಕಿನ ಕಮರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ತಾಲೂಕಿನ ಯಡವನಹಳ್ಳಿ ಗ್ರಾಮದ ಗೋವಿಂದಸ್ವಾಮಿ(೩೨)ಈತನ ಮೃತ ದೇಹ ಕೆರೆಯ ದಡದಲ್ಲಿ ಬಿದ್ದಿದೆ .ಅಲ್ಲದೆ ಆತನ ಬೈಕ್‌ ಕೂಡ ಸನಿಹವೇ ಇದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆನವ ವಿವಾಹಿತನೊಬ್ಬನ ಮೃತದೇಹ ತಾಲೂಕಿನ ಕಮರಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ತಾಲೂಕಿನ ಯಡವನಹಳ್ಳಿ ಗ್ರಾಮದ ಗೋವಿಂದಸ್ವಾಮಿ(೩೨)ಈತನ ಮೃತ ದೇಹ ಕೆರೆಯ ದಡದಲ್ಲಿ ಬಿದ್ದಿದೆ .ಅಲ್ಲದೆ ಆತನ ಬೈಕ್‌ ಕೂಡ ಸನಿಹವೇ ಇದೆ. ಇದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ.ಆದರೆ ಮೃತ ಗೋವಿಂದಸ್ವಾಮಿಯ ಸಾವಿಗೆ ಸೊಸೆಯೇ ಕಾರಣ ಎಂದು ಮೃತನ ತಂದೆ ಬೇಗೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬೇಗೂರು ಪೊಲೀಸರು ಮೃತನ ಸಹೋದರ ದೂರಿನ ಆಧಾರದ ಮೇಲೆ ಮೃತನ ಪತ್ನಿ ಅರ್ಚನಳ ಮೇಲೆ ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಏನಿದು ಗಲಾಟೆ?:

ಮೃತ ಗೋವಿಂದಸ್ವಾಮಿ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಅರ್ಚನಳ ಜೊತೆ ಕಳೆದ ಆರು ತಿಂಗಳ ಹಿಂದೆ ಮದುವೆ ಆಗಿತ್ತು. ಪ್ರಾರಂಭದಲ್ಲಿ ದಂಪತಿ ಅನ್ಯೋನ್ಯವಾಗಿ ಇದ್ದರು ಎಂಬುದು ಗ್ರಾಮಸ್ಥರ ಮಾತಾಗಿದೆ. ಸೋಮವಾರ ರಾತ್ರಿ ಮೃತ ಗೋವಿಂದಸ್ವಾಮಿ ಹಾಗೂ ಅರ್ಚನ(ಗಂಡ,ಹೆಂಡತಿ) ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರು ವಾಗಿದೆ. ಗಲಾಟೆಯ ಸಮಯದಲ್ಲಿ ಅರ್ಚನ ಗಂಡನಿಗೆ ಕಪಾಳ ಮೋಕ್ಷ ಮಾಡಿದಳು ಎನ್ನಲಾಗಿದೆ.

ಪತ್ನಿ ಜನರ ಎದುರು ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಮನೆಯಿಂದ ಸೋಮವಾರ ರಾತ್ರಿಯೇ ಹೊರ ಹೋಗಿದ್ದಾನೆ ಎನ್ನಲಾಗಿದ್ದು, ಮೃತ ಗೋವಿಂದಸ್ವಾಮಿ ಮನೆಯಿಂದ ಕಾಣೆಯಾಗಿದ್ದಾನೆ ಎಂದು ಸೋಮವಾರ ಬೆಳಗ್ಗೆ ಪ್ರಕರಣ ಬೇಗೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಮಂಗಳವಾರ ಕಮರಹಳ್ಳಿ ಕೆರೆಯಲ್ಲಿ ಮೃತ ದೇಹ ಕಾಣಿಸಿಕೊಂಡಿದೆ. ಪೊಲೀಸರು ಪರಿಶೀಲನೆ ನಡೆಸಿದಾಗ ಕಾಣೆಯಾದ ಗೋವಿಂದಸ್ವಾಮಿ ಎಂದು ಗುರುತಿಸಿದರು ಬಳಿಕ ಮೃತನ ಸಂಬಂಧಿಕರಿಗೆ ವಿಷಯ ಮುಟ್ಟಿಸಿದಾಗ ಮೃತ ದೇಹ ಗೋವಿಂದಸ್ವಾಮಿಯೇ ಎಂದು ಖಚಿತವಾಗಿದೆ. ಮೃತರ ಸಂಬಂಧಿಕರ ಹೇಳಿಕೆ ಪ್ರಕಾರ ಪತ್ನಿಯ ಹಿಂಸೆಯೇ ಸಾವಿಗೆ ಕಾರಣ ಎನ್ನುತ್ತಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಮೃತ ಗೋವಿಂದಸ್ವಾಮಿ ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಕೊಲೆಯಾಗಿದೆಯೋ ಎಂಬುದು ಪೊಲೀಸರ ತನಿಖೆಯ ಬಳಿಕ ಸತ್ಯಾಂಶ ಹೊರ ಬರಲಿದೆ.