ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ಮದ್ದೂರು ಮಾರ್ಗವಾಗಿ ಮಂಡ್ಯ ಕಡೆಗೆ ಸಾಗಾಣಿಕೆ ಮಾಡಲಾಗುತ್ತಿತ್ತು. ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಗೂಡ್ಸ್ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹುಳು ಬಿದ್ದ ಪಡಿತರ ಗೋಧಿ ಸಾಗಾಣಿಕೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಬಳಸಲು ಯೋಗ್ಯವಲ್ಲದ ಪಡಿತರ ಗೋಧಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ವಾಹನವನ್ನು ಮದ್ದೂರು ಆಹಾರ ಇಲಾಖೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಅವರಿಗೆ ದೊರೆತ ಮಾಹಿತಿ ಆಧಾರದ ಮೇಲೆ ಆಹಾರ ನಿರೀಕ್ಷಕ ಸಂಜಯ್ ಹಾಗೂ ರಾಜಸ್ವನಿರೀಕ್ಷಕ ಬಸವರಾಜ್ ಅವರು ದಾಳಿ ನಡೆಸಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ 41 ಚೀಲ ಹುಳಿ ಬಿದ್ದ ಪಡಿತರ ಗೋದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಿಂದ ಮದ್ದೂರು ಮಾರ್ಗವಾಗಿ ಮಂಡ್ಯ ಕಡೆಗೆ ಸಾಗಾಣಿಕೆ ಮಾಡಲಾಗುತ್ತಿತ್ತು. ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಗೂಡ್ಸ್ ವಾಹನವನ್ನು ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹುಳು ಬಿದ್ದ ಪಡಿತರ ಗೋಧಿ ಸಾಗಾಣಿಕೆ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶದ ಹರಿಯಾಣ ರಾಜ್ಯದಿಂದ ಆಮದ್ದಾಗಿದ್ದ ಗೋಧಿಯನ್ನು ಗೋದಾಮುವೊಂದರಲ್ಲಿ ಬಹಳ ವರ್ಷಗಳಿಂದ ದಾಸ್ತಾನು ಮಾಡಿದ್ದ ಹಿನ್ನೆಲೆಯಲ್ಲಿ ಸಂಪೂರ್ಣ ಹುಳು ಬಿದ್ದು ಬಳಸಲು ಯೋಗ್ಯವಲ್ಲದ ಕಾರಣ ಕೋಳಿ ಸಾಗಾಣಿಕೆ ಕೇಂದ್ರಗಳಿಗೆ ಮಾರಾಟ ಮಾಡಲು ಕೊಂಡೊಯ್ಯಲಾಗುತ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ನೀಡಿದ ದೂರಿನ ಅನ್ವಯ ಮದ್ದೂರು ಪೊಲೀಸರು ಲಾರಿ ಚಾಲಕ ಮತ್ತು ಮಾಲೀಕನ ಮೇಲೆ ಅಗತ್ಯ ವಸ್ತುಗಳ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಕುರಿ ತೊಳೆಯುವ ವೇಳೆ ಕಟ್ಟೆಯಲ್ಲಿ ಮುಳುಗಿ ರೈತ ಸಾವುಕೆ.ಆರ್.ಪೇಟೆ: ಕಟ್ಟೆಯಲ್ಲಿ ಕುರಿ ತೊಳೆಯಲು ಹೋದ ರೈತ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಆನೆಗೊಳ ಗ್ರಾಮದ ಯೋಗೇಶ್ (49)ಸಾವನ್ನಪ್ಪಿದ ರೈತ. ಕಟ್ಟೆಯಲ್ಲಿ ಕುರಿ ತೊಳೆಯುವ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ. ಎಂದಿನಂತೆ ಕುರಿ ಮೇಯಿಸಲು ಹೋಗಿದ್ದ ರೈತ ಯೋಗೇಶ್ ಅಂಚೆಬೀರನಹಳ್ಳಿ ಕಟ್ಟೆಯಲ್ಲಿ ಕಟ್ಟೆಯಲ್ಲಿ ಕುರಿ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ಕಟ್ಟೆಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುನಿಸ್ವಾಮಿ ನಾಪತ್ತೆಹಲಗೂರು: ಸಮೀಪದ ಹುಚ್ಚೇಗೌಡನದೊಡ್ಡಿ ಗ್ರಾಮದ ಮುನಿಸ್ವಾಮಿ (55 ) ನಾಪತ್ತೆಯಾಗಿರುವುದಾಗಿ ಪತ್ನಿ ಕುಮಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಡಿ.18ರ ಬೆಳಗ್ಗೆ ಮನೆಯಿಂದ ಕಾರ್ಯನಿಮಿತವಾಗಿ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ. ನಮ್ಮ ಸಂಬಂಧಿಕರ ಮನೆ ಹಾಗೂ ಪರಿಚಯಸ್ಥರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ. ಮುನಿಸ್ವಾಮಿ ಅವರನ್ನು ಹುಡುಕಿಸಿ ಕೊಡುವಂತೆ ಹಲಗೂರು ಪೊಲೀಸ್ ಠಾಣೆಗೆ ಪತ್ನಿ ಕುಮಾರಿ ದೂರು ನೀಡಿದ ಅನ್ವಯ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ .ಮುನಿಸ್ವಾಮಿ ಮನೆಯಿಂದ ಹೊರ ಹೋಗುವಾಗ ನೀಲಿ ಶರ್ಟು ನೀಲಿ ಚಡ್ಡಿ ಧರಿಸಿದ್ದನು, ಕಪ್ಪು ಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು ,6.5 ಅಡಿ ಎತ್ತರ, ಈತನನ್ನು ಕಂಡರೆ ತಕ್ಷಣ ದೂ-08231295322 ಅಥವಾ ಮೊ-9480804866 ತಿಳಿಸುವಂತೆ ಪೋಲಿಸರು ಕೋರಿದ್ದಾರೆ.