ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ಶ್ರೀರಾಮಮಂದಿರ ದೇವಾಲಯಕ್ಕೆ ಸೇರಿದ ವರ್ಷಾಸನ ಹಣ ನಿಯಮಬಾಹಿರವಾಗಿ ಪಾವತಿ ಮಾಡಿರುವ ಸಂಬಂಧ ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ೧.೭೧ ಲಕ್ಷ ರು. ದಂಡ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಇದುವರೆಗೂ ದಂಡ ಪಾವತಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ಶ್ರೀರಾಮಮಂದಿರ ದೇವಾಲಯಕ್ಕೆ ಸೇರಿದ ವರ್ಷಾಸನ ಹಣ ನಿಯಮಬಾಹಿರವಾಗಿ ಪಾವತಿ ಮಾಡಿರುವ ಸಂಬಂಧ ಅಧಿಕಾರಿಗಳು, ನೌಕರರು, ಸಿಬ್ಬಂದಿಗೆ ೧.೭೧ ಲಕ್ಷ ರು. ದಂಡ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರೂ ಇದುವರೆಗೂ ದಂಡ ಪಾವತಿಸದೆ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ.ದೇವಾಲಯವು ಸಿ ಪ್ರವರ್ಗದ ಅಧಿಸೂಚಿತ ಸಂಸ್ಥೆಯಾಗಿದೆ. ತಹಸೀಲ್ದಾರ್ ಆಡಳಿತ ಉಸ್ತುವಾರಿ ಇದ್ದ ಸಮಯದಲ್ಲಿ ೨೦೦೩-೦೪ನೇ ಸಾಲಿನಿಂದ ೨೦೨೪ನೇ ಸಾಲಿನವರೆಗೆ ವರ್ಷಾಸನ ಹಣವನ್ನು ನಿಯಮಬಾಹಿರವಾಗಿ ಅರ್ಚಕರಲ್ಲದವರಿಗೆ ನೀಡಿ ದೇವಾಲಯಕ್ಕೆ ಆರ್ಥಿಕ ನಷ್ಟ ಉಂಟುಮಾಡಿರುವ ಅಧಿಕಾರಿ, ನೌಕರರಿಂದ ಹಣ ವಸೂಲಿ ಮಾಡಿ ದೇವಾಲಯದ ಖಾತೆಗೆ ಜಮೆ ಮಾಡುವಂತೆ ಮೋಹನ್‌ಕುಮಾರ್ ಅವರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.
ಈ ದೂರಿನನ್ವಯ ಜಿಲ್ಲಾಧಿಕಾರಿ ಕಚೇರಿಯ ಧಾರ್ಮಿಕ ದತ್ತಿ ತಹಸೀಲ್ದಾರ್ ಅವರು ಸಲ್ಲಿಸಿರುವ ಪರಿಶೀಲನಾ ವರದಿ ಪ್ರಕಾರ ೨೦೦೩-೦೪ನೇ ಸಾಲಿನಿಂದ ೨೦೨೪ನೇ ಸಾಲಿನವರೆಗೆ ೧,೭೧,೭೯೮ ರು.ಗಳನ್ನು ಯಾವುದೇ ದಾಖಲೆ ನಿರ್ವಹಿಸದೆ ವಿಚಾರಣೆ ಸಮಯದಲ್ಲಿ ಯಾವುದೇ ಸಮರ್ಥ ದಾಖಲೆ ಹಾಜರುಪಡಿಸದೆ ದೇವಾಲಯದ ಅರ್ಚಕರಲ್ಲದವರಿಗೆ ಹಣ ಪಾವತಿ ಮಾಡಿರುವುದು ಕಂಡುಬಂದಿರುವುದಾಗಿ ವರದಿಯಲ್ಲಿ ದಾಖಲಿಸಿದ್ದರು.ವರ್ಷಾಸನ ಹಣ ಪಾವತಿಗೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಶೀಲನೆ ನಡೆಸದೆ ದಾಖಲೆ ನಿರ್ವಹಿಸದೆ ದೇವಾಲಯದ ಅರ್ಚಕರಲ್ಲದವರಿಗೆ ಹಣ ಪಾವತಿ ಮಾಡಿರುವ ಸಂಬಂಧ ತಹಸೀಲ್ದಾರ್, ಮುಜರಾಯಿ ಶಾಖೆ ಅಧೀಕ್ಷಕರು, ವಿಷಯ ನಿರ್ವಾಹಕರಿಂದ ೧,೭೧,೭೯೮ ರು. ವಸೂಲಿ ಮಾಡಿ ದೇವಾಲಯದ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಸೂಕ್ತವಾಗಿದೆ. ಅರ್ಚಕರಲ್ಲದವರಿಗೆ ಹಣ ಪಾವತಿ ಮಾಡಿರುವ ಅಧಿಕಾರಿಗಳು-ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು.
ಅದರಂತೆ ಸಂಬಂಧಿಸಿದ ಅಧಿಕಾರಿಗಳು, ನೌಕರರಿಗೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ೧೧ ಜುಲೈ ೨೦೨೫ರಲ್ಲೇ ನಿಯಮಬಾಹಿರವಾಗಿ ಪಾವತಿಸಿರುವ ವರ್ಷಾಸನ ಮೊತ್ತವನ್ನು ಸೂಲಿ ಮಾಡುವಂತೆ ಪಾಂಡವಪುರ ಉಪವಿಭಾಗಾಧಿಕಾರಿಗೆ ಪತ್ರ ಮುಖೇನ ಆದೇಶಿಸಿದ್ದರು. ಹಣ ವಸೂಲಿಗೆ ಸಂಬಂಧಿಸಿದಂತೆ ಎರಡು ಬಾರಿ ತಿಳಿವಳಿಕೆ ಪತ್ರ ನೀಡಿದ್ದರೂ ಅಧಿಕಾರಿಗಳು-ನೌಕರರು ಕ್ಯಾರೆ ಎಂದಿಲ್ಲ. ಕೂಡಲೇ ವರ್ಷಾಸನದ ಮೊತ್ತವನ್ನು ವಸೂಲಿ ಮಾಡಿ ದೇವಾಲಯ ಖಾತೆಗೆ ಜಮೆ ಮಾಡುವುದರ ಜೊತೆಗೆ ತಪ್ಪಿತಸ್ಥ ಅಧಿಕಾರಿಗಳು-ನೌಕರರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಅಗತ್ಯ ಪ್ರಸ್ತಾವನೆ, ದೋಷಾರೋಪಣಾ ಪಟ್ಟಿಯನ್ನು ಜರೂರಾಗಿ ಕಚೇರಿಗೆ ಸಲ್ಲಿಸುವಂತೆ ತಿಳಿಸಿದ್ದಾರೆ.ಯಾರ್‍ಯಾರಿಗೆ ದಂಡ, ಎಷ್ಟೆಷ್ಟು?ಕಾರ್ಯನಿರ್ವಹಿಸಿದ ಅವಧಿತಹಸೀಲ್ದಾರ್ಶಿರಸ್ತೇದಾರ್ವಿಷಯ ನಿರ್ವಾಹಕರುವಸೂಲಿ ಮೊತ್ತ
೧೫.೭.೨೦೦೭- ೬.೮.೨೦೦೮ಬಿ.ಆರ್.ಪೂರ್ಣಿಮಾಎನ್.ಮಹದೇವಪ್ಪನಾಗರಾಜು ಭಗವಾನ್೧೦೨೫/-೬.೮.೨೦೦೭- ೧೩.೧.೨೦೦೯ಕವಿತಾರಾಣಿಎನ್.ಮಹದೇವಪ್ಪಪ್ರಸನ್ನ೧೦೫೩/-
೧೨.೪.೨೦೧೯-೮.೪.೨೦೧೩ಅರುಳ್‌ಕುಮಾರ್ಸುರೇಶ್ರಮೇಶ್೧೨,೫೪೦/-೭.೩.೨೦೧೪-೨೦.೮.೨೦೧೪ಎಂ.ಮಲ್ಲಿಕಾರ್ಜುನ್ಸುರೇಶ್ಗುಂಡೂರಾವ್೪೦೦/-
೨೦.೮.೨೦೧೫-೧೧.೮.೨೦೧೬ಎಂ.ದಯಾನಂದಆನಂದ್ಗುಂಡೂರಾವ್೫೪೦/-೧೧.೮.೨೦೧೬-೨೩.೧೨.೨೦೧೭ಕೆ.ಕೃಷ್ಣಆನಂದ್ಗುಂಡೂರಾವ್೧೬೨೦/-
೧೮.೧೦.೨೦೧೯-೨೩.೭.೨೦೨೧ಎಂ.ಬಿ.ರೂಪಾಕೆ.ಎಂ.ಸ್ವಾಮಿಗೌಡಎಂ.ಜಿ.ಮಹೇಶ್೬೦೦೦/-೨೩.೭.೨೦೨೧-೩.೩.೨೦೨೩ಶ್ವೇತಾಪುಟ್ಟಸ್ವಾಮಿಎಂ.ಜಿ.ಮಹೇಶ್೧೫೦೦೦/-
೩..೨೦೨೩-೨.೧೧.೨೦೨೩ಜಿ.ಅಶ್ವಿನಿಪ್ರಸನ್ನರಾಹುಲ್೨೪೦೦೦/-