ಅದಾನಿ ವಿರುದ್ಧ ನಿಮ್ಮಲ್ಲಿ ಏನು ಸಾಕ್ಷಿಯಿದೆ: ಸುಪ್ರೀಂ ಪ್ರಶ್ನೆ

| Published : Nov 25 2023, 01:15 AM IST

ಅದಾನಿ ವಿರುದ್ಧ ನಿಮ್ಮಲ್ಲಿ ಏನು ಸಾಕ್ಷಿಯಿದೆ: ಸುಪ್ರೀಂ ಪ್ರಶ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ನವದೆಹಲಿ: ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯ ವರದಿಯಲ್ಲಿ ಆರೋಪಿಸಿದಂತೆ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹವು ಹಣಕಾಸು ಅಕ್ರಮದಲ್ಲಿ ತೊಡಗಿರುವ ಬಗ್ಗೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ ಎಂದು ಅರ್ಜಿದಾರರನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ.

ಮಾಧ್ಯಮ ವರದಿ ಆಧರಿಸಿ ತನಿಖೆ ಕೋರಿದ್ದ ಭೂಷಣ್‌ಗೆ ತರಾಟೆ

ಹಿಂಡನ್‌ಬರ್ಗ್‌ ವರದಿ ಆಧಾರದಲ್ಲಿ ಸಲ್ಲಿಸಿದ ಪಿಐಎಲ್‌ಗಳ ವಿಚಾರಣೆನವದೆಹಲಿ: ಅಮೆರಿಕದ ಹಿಂಡನ್‌ಬರ್ಗ್‌ ಸಂಸ್ಥೆಯ ವರದಿಯಲ್ಲಿ ಆರೋಪಿಸಿದಂತೆ ಉದ್ಯಮಿ ಗೌತಮ್‌ ಅದಾನಿ ಒಡೆತನದ ಅದಾನಿ ಸಮೂಹವು ಹಣಕಾಸು ಅಕ್ರಮದಲ್ಲಿ ತೊಡಗಿರುವ ಬಗ್ಗೆ ನಿಮ್ಮಲ್ಲಿ ಏನು ಸಾಕ್ಷ್ಯಗಳಿವೆ ಎಂದು ಅರ್ಜಿದಾರರನ್ನು ಸುಪ್ರೀಂಕೋರ್ಟ್‌ ಪ್ರಶ್ನಿಸಿದೆ. ಅದಾನಿ ಸಮೂಹವು ಷೇರು ಮಾರುಕಟ್ಟೆಯಲ್ಲಿ ಅಕ್ರಮಗಳನ್ನು ಎಸಗುತ್ತಿದೆ ಹಾಗೂ ಲೆಕ್ಕಪತ್ರಗಳಲ್ಲೂ ಅಕ್ರಮ ಎಸಗುತ್ತಿದೆ ಎಂದು ಹಿಂಡನ್‌ಬರ್ಗ್‌ ಸಂಸ್ಥೆಯು ಈ ವರ್ಷದ ಜನವರಿಯಲ್ಲಿ ವರದಿ ಪ್ರಕಟಿಸಿತ್ತು. ಅದು ತೀವ್ರ ವಿವಾದಕ್ಕೆ ಕಾರಣವಾಗಿ, ಅದಾನಿ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ ಹಲವಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ, ‘ಅದಾನಿ ಸಮೂಹ ಅಕ್ರಮ ಎಸಗಿದೆ ಎಂಬ ಬಗ್ಗೆ ನಿಮ್ಮಲ್ಲಿ ಏನು ಸಾಕ್ಷ್ಯವಿದೆ’ ಎಂದು ಅರ್ಜಿದಾರರ ಪರ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಅವರನ್ನು ಶುಕ್ರವಾರ ಪ್ರಶ್ನಿಸಿತು.‘ನಾವೇಕೆ ಯಾವುದೋ ವಿದೇಶಿ ವರದಿಯನ್ನು ಸತ್ಯವೆಂದು ನಂಬಬೇಕು? ಆ ವರದಿಯನ್ನು ನಾವು ಅಲ್ಲಗಳೆಯುತ್ತಿಲ್ಲ. ಆದರೆ ನಮಗೆ ಸಾಕ್ಷ್ಯ ಬೇಕು. ಅದಾನಿ ಸಮೂಹದ ವಿರುದ್ಧ ನಿಮ್ಮಲ್ಲಿ ಏನು ಸಾಕ್ಷ್ಯವಿದೆ. ಸುಖಾಸುಮ್ಮನೆ ಆರೋಪ ಮ ಆಡುವ ಮುನ್ನ ಎಚ್ಚರಿಕೆಯಿಂದ ಇರಬೇಕು’ ಎಂದು ಪೀಠ ಕೇಳಿತು ಹಾಗೂ ವಿಚಾರಣೆ ಮುಂದೂಡಿತು.