ಸಾರಾಂಶ
ಆಯ ತಪ್ಪಿ ಬಿದ್ದು ಬೈಕ್ ಸವಾರ ಸಾವುನಂಜನಗೂಡು ತಾಲೂಕಿನ ಗಾಂಧಿ ಗ್ರಾಮದ ಬಳಿ ಘಟನೆ ನಡೆದಿದೆ
ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದ ಬಳಿ ಘಟನೆ ನಡೆದಿದೆನಂಜನಗೂಡು: ದ್ವಿಚಕ್ರ ಸವಾರ ಸಿಮೆಂಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಆಯಾತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಗಾಂಧಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಹಗಿನವಾಳು ಗ್ರಾಮದ ಆನಂದ್ (21) ಮೃತಪಟ್ಟಿರುವ ರ್ದುದೈವಿ. ಅಡುಗೆ ಕೆಲಸ ಮಾಡಿಕೊಂಡಿದ್ದ ಆನಂದ್ ಸೋಮವಾರ ಸಂಜೆ ಸ್ನೇಹಿತರ ಜೊತೆ ನಂಜನಗೂಡಿನಲ್ಲಿ ಸ್ನೇಹಿತನ ಜನ್ಮದಿನವನ್ನು ಆಚರಿಸಿ 7 ಗಂಟೆ ಸುಮಾರಿಗೆ ತನ್ನ ಸ್ನೇಹತನನ್ನು ಹರತಲೆ ಗ್ರಾಮಕ್ಕೆ ಬಿಟ್ಟು ಅದೇ ಮಾರ್ಗವಾಗಿ ಹುಲ್ಲಹಳ್ಳಿಗೆ ತೆರಳುವಾಗ ಮಾರ್ಗದಲ್ಲಿ ಗಾಂಧಿ ಗ್ರಾಮದ ಕಾಲುವೆ ಏರಿಯ ಬಳಿ ದ್ವಿಚಕ್ರವಾಹನ ತಡೆಗೋಡೆಗೆ ಡಿಕ್ಕಿ ಹೊಡೆದು, ಆಯತಪ್ಪಿ ಬಿದ್ದ ಪರಿಣಾಮ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾದ ಹಿನ್ನೆಲೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸ್ ಠಾಣೆಯ ಎಸ್ಐ ಜಯಪ್ರಕಾಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದರು.