ಬೈಕ್‌ ವಿರುದ್ಧ 255 ಸಂಚಾರ ನಿಯಮಉಲ್ಲಂಘನೆ ಕೇಸ್‌: ₹1.34 ಲಕ್ಷ ದಂಡ

| Published : Dec 13 2023, 01:00 AM IST

ಬೈಕ್‌ ವಿರುದ್ಧ 255 ಸಂಚಾರ ನಿಯಮಉಲ್ಲಂಘನೆ ಕೇಸ್‌: ₹1.34 ಲಕ್ಷ ದಂಡ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರುನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದ್ವಿಚಕ್ರ ವಾಹನವೊಂದರ ವಿರುದ್ಧ ಬರೋಬ್ಬರಿ ₹1.34 ಲಕ್ಷ ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ!

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದ್ವಿಚಕ್ರ ವಾಹನವೊಂದರ ವಿರುದ್ಧ ಬರೋಬ್ಬರಿ ₹1.34 ಲಕ್ಷ ದಂಡ ಬಾಕಿ ಇರುವುದು ಬೆಳಕಿಗೆ ಬಂದಿದೆ!

ಜಯನಗರದ ಏಳುಮಲೈ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನದ ಮೇಲೆ 255 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ₹1,34,500 ದಂಡ ಬಾಕಿ ಇದೆ. ಆದರೆ ಬೈಕ್‌ನ ಬೆಲೆ ಕೇವಲ ₹30 ಸಾವಿರ ಎಂದು ತಿಳಿದುಬಂದಿದೆ.

ಜಯನಗರ ಸಂಚಾರ ಠಾಣೆಯ ಎಎಸ್‌ಐ ಮಹದೇವ ಮತ್ತು ಹೆಡ್‌ ಕಾನ್‌ಸ್ಟೇಬಲ್‌ ರವಿಕುಮಾರ್‌ ಅವರು ಮಂಗಳವಾರ ಜೆ.ಪಿ.ನಗರದ ರಾಗೀಗುಡ್ಡದ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಏಳುಮಲೈ ಅವರು ದ್ವಿಚಕ್ರ ವಾಹನದಲ್ಲಿ ಅದೇ ಮಾರ್ಗದಲ್ಲಿ ಬಂದಿದ್ದಾರೆ. ಆಗ ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಿದಾಗ ₹1.34 ಲಕ್ಷ ದಂಡ ಬಾಕಿ ಇರುವುದು ಗೊತ್ತಾಗಿದೆ. ಈ ವೇಳೆ ಮಾಲೀಕ ಬಾಕಿ ದಂಡದ ಮೊತ್ತದ ಪೈಕಿ 20 ಪ್ರಕರಣಗಳ ಸಂಬಂಧ ₹10 ಸಾವಿರ ದಂಡ ಪಾವತಿಸಿದ್ದಾರೆ.

ಆದರೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿರುವ ಸಂಚಾರ ಪೊಲೀಸರು, ಉಳಿಕೆ ದಂಡದ ಮೊತ್ತ ಪಾವತಿಸುವಂತೆ ನೋಟಿಸ್‌ ಜಾರಿ ಮಾಡಿದ್ದಾರೆ.