ಸಾರಾಂಶ
ಹಣಕಾಸಿನ ವಿಚಾರಕ್ಕೆ ಆರ್.ಆರ್.ಇಂಡಸ್ಟ್ರೀಸ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಕ್ರಾಸ್ ಬಳಿ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೀಣ್ಯ ದಾಸರಹಳ್ಳಿ : ಹಣಕಾಸಿನ ವಿಚಾರಕ್ಕೆ ಆರ್.ಆರ್.ಇಂಡಸ್ಟ್ರೀಸ್ ಮಾಲೀಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆ ಕ್ರಾಸ್ ಬಳಿ ನಡೆದಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಮೇಶ್ (52) ವರ್ಷ ಕೊಲೆಯಾದ ಉದ್ಯಮಿ. ಸೈಯದ್ ತಾಜ್ ಉದ್ದೀನ್ (50), ಸೈಯದ್ ಆಯೂಬ್ (30) ಕೊಲೆ ಮಾಡಿದ ಆರೋಪಿಗಳು. ಆರ್.ಆರ್.ಇಂಡಸ್ಟ್ರೀಸ್ ಮಾಲೀಕ ರಮೇಶ್ ಬಳಿ ಕಾರ್ಮಿಕರು ಹಣ ಪಡೆದು ಕೆಲಸ ಮಾಡದಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಮಾಲೀಕ ಹಾಗೂ ಕಾರ್ಮಿಕರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕಾರ್ಮಿಕರಿಬ್ಬರು ರಮೇಶ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಕೊಲೆ ಮಾಡಿ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದು, ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.