ಅಪರಿಚಿತ ಬೈಕ್ ಡಿಕ್ಕಿ: ಪಾದಚಾರಿ ಸಾವು

| Published : Aug 28 2024, 12:56 AM IST

ಸಾರಾಂಶ

ಶ್ರೀನಿವಾಸ್ ಮುಡೀನಹಳ್ಳಿ ಗೇಟ್ ಬಳಿ ಇರುವ ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಸ್ವಗ್ರಾಮ ತೊರೆಬೊಮ್ಮನಹಳ್ಳಿಗೆ ಹಿಂತಿರುಗುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ಬೈಕ್ ಡಿಕ್ಕಿಹೊಡೆದಿದೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಪರಿಚಿತ ಬೈಕ್ ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಡೀನಹಳ್ಳಿ ಗೇಟ್ ಬಳಿ ಜರುಗಿದೆ.

ತೊರೆಬೊಮ್ಮನಹಳ್ಳಿಯ ಟಿ.ಸಿ.ಶ್ರೀನಿವಾಸ್ (46) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿ. ಶ್ರೀನಿವಾಸ್ ಮುಡೀನಹಳ್ಳಿ ಗೇಟ್ ಬಳಿ ಇರುವ ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಸ್ವಗ್ರಾಮ ತೊರೆಬೊಮ್ಮನಹಳ್ಳಿಗೆ ಹಿಂತಿರುಗುತ್ತಿದ್ದಾಗ ಹಿಂಬದಿಯಿಂದ ಅಪರಿಚಿತ ಬೈಕ್ ಡಿಕ್ಕಿಹೊಡೆದಿದೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾನೆ.

ಬೈಕ್ ಸವಾರರು ಸಹ ಕೆಳಗೆ ಬಿದ್ದಿದ್ದಾರೆ. ಆದರೆ, ಪ್ರಾಣಾಪಾಯದಲ್ಲಿದ್ದ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮಾನವೀಯತೆ ತೋರಿದೆ ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಕೆ.ಎಂ.ದೊಡ್ಡಿ ಇನ್ಸ್‌ಪೆಕ್ಟರ್ ಆನಂದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಬೈಕ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ್ ಅವರ ಮೃತ ದೇಹವನ್ನು ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಂಚಾನಾಮೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ವೆಂಕಟಲಕ್ಷ್ಮಮ್ಮ ನಿಧನ

ಕಿಕ್ಕೇರಿ:ಪಟ್ಟಣದ ವಿಪ್ರ ಸಮಾಜದ ಹಿರಿಯರಾದ ಶತಾಯುಷಿ ವೆಂಕಟಲಕ್ಷ್ಮಮ್ಮ(102) ನಿಧನರಾದರು.

ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದಾರೆ. ಮೃತರು ಮೂರು ದಶಕಗಳ ಹಿಂದೆ ‘ಗುಂಡಪ್ಪ ಹೋಟೆಲ್ ಖಾಲಿ ಬೆಣ್ಣೆದೋಸೆ’ ಎಂದು ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿದ್ದರು. ದಿ.ಗುಂಡಪ್ಪನವರ ಪತ್ನಿಯಾಗಿದ್ದಾರೆ.ಮೈಸೂರು-ಶಿವಮೊಗ್ಗ ಮಾರ್ಗವಾಗಿ ಓಡಾಡುವ ಸಾರಿಗೆ ಬಸ್ ಸಂಚಾರ ವಾಹನ ಹಿಡಿದು ಖಾಸಗಿ ವಾಹನಗಳ ಸವಾರರು, ಪ್ರಯಾಣಿಕರು ಕಡ್ಡಾಯವಾಗಿ ದೋಸೆ ಸವಿಯಲು ಆಗಮಿಸುತ್ತಿದ್ದರು. ನೂರಾರು ಕಾರ್ಮಿಕರಿಗೆ ಆಶ್ರಯದಾತರಾಗಿ ಚಿರಪರಿಚಿತರಾಗಿದ್ದರು. ಕೋಡಿಮಾರನಹಳ್ಳಿ ಬಳಿಯ ಮೃತರ ಜಮೀನಿನಲ್ಲಿ ಮಂಗಳವಾರ ಮೃತರ ಅಂತ್ಯಕ್ರಿಯೆ ನಡೆಯಿತು.