ಭಾರತೀನಗರ : ತಮ್ಮ ಜಮೀನಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಅಪರಿಚಿತ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು

| Published : Oct 07 2024, 01:37 AM IST / Updated: Oct 07 2024, 05:09 AM IST

death

ಸಾರಾಂಶ

ಹನುಮಂತ ನಗರದಲ್ಲಿ ವಾಸವಿದ್ದ ಕೆ.ಬಿ.ನಾಗಣ್ಣ ತಮ್ಮ ಜಮೀನಿನಿಂದ ಮನೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಅಪರಿಚಿತ ಕಾರು ಡಿಕ್ಕಿಹೊಡೆದಿದೆ. ಗಂಭೀರವಾಗಿ ಗಾಯಗೊಂಡ ನಾಗಣ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.   ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 ಭಾರತೀನಗರ : ಅಪರಿಚಿತ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ದೇವರಹಳ್ಳಿ ಗೇಟ್ ಬಳಿ ನಡೆದಿದೆ.

ಕರಡಕೆರೆ ಗ್ರಾಮದ ಕೆ.ಬಿ.ನಾಗಣ್ಣ(55) ಮೃತಪಟ್ಟ ದುರ್ದೈವಿ.

ಹನುಮಂತ ನಗರದಲ್ಲಿ ವಾಸವಿದ್ದ ಕೆ.ಬಿ.ನಾಗಣ್ಣ ತಮ್ಮ ಜಮೀನಿನಿಂದ ಮನೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಅಪರಿಚಿತ ಕಾರು ಡಿಕ್ಕಿಹೊಡೆದಿದೆ. ಗಂಭೀರವಾಗಿ ಗಾಯಗೊಂಡ ನಾಗಣ್ಣ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅಕ್ಕಪಕ್ಕದವರು ಸ್ಥಳಿಯ ಜಿ.ಮಾದೇಗೌಡ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತರ ಪಂಚನಾಮೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ ಸಂಬಂಧಿ ಸತೀಶ್ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಮೃತರಿಗೆ ಪತ್ನಿ ಅಶ್ವಿನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಸಂಸ್ಕಾರ ಸ್ವಗ್ರಾಮ ಕರಡಕೆರೆಯ ರುದ್ರಭೂಮಿಯಲ್ಲಿ ಜರುಗಿತು.

ಅಪರಿಚಿತ ವ್ಯಕ್ತಿ ಸಾವು

ಮದ್ದೂರು:ಅನಾರೋಗ್ಯದಿಂದ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ಜರುಗಿದೆ.

ಪಟ್ಟಣದ ಎಲ್ಲಮ್ಮ ತಾಯಿ ಆರ್ಚ್ ಬಳಿ ಹಲವು ದಿನಗಳಿಂದ ತೆವಳಿಕೊಂಡು ಓಡಾಡುತ್ತಿದ್ದ 35 ರಿಂದ 40 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಕೊನೆ ಉಸಿರೆಳೆದಿದ್ದಾನೆ. ಮೃತನು 5.6 ಅಡಿ ಎತ್ತರವಿದ್ದು. ಕೃಶವಾದ ಶರೀರ, ಕೋಲುಮುಖ, ಗೋಧಿ ಮೈ ಬಣ್ಣ, ಕಪ್ಪು ಮಿಶ್ರಿತ ಕೂದಲು ಗಡ್ಡ ಮೀಸೆ ಬಿಟ್ಟಿದ್ದಾನೆ. ನೀಲಿ ಮಿಶ್ರಿತ ಟೀ ಶರ್ಟ್, ಮಾಸಲು ಬಣ್ಣದ ನಿಕ್ಕರ ಧರಿಸಿದ್ದಾನೆ. ಎಡಗೈ ಮೇಲೆ ಆನಂದ್ ಎಂಬ ಅಚ್ಚೆ ಗುರುತು ಇದೆ. ಈತನ ಬಗ್ಗೆ ಮಾಹಿತಿ ಉಳ್ಳವರು ಮದ್ದೂರು ಪೊಲೀಸರನ್ನು ಸಂಪರ್ಕಿಸುವಂತೆಕೋರಲಾಗಿದೆ.

ವೆಂಕಟೇಗೌಡ ನಿಧನ

ಭಾರತೀನಗರ:  ಮಂಡಲ ಪಂಚಾಯ್ತಿ ಮಾಜಿ ಪ್ರಧಾನ ಹಾಗೂ ಶ್ರೀಚಾಮುಂಡೇಶ್ವರ ಸಕ್ಕರೆ ಕಾರ್ಖಾನೆ ನಿವೃತ್ತ ನೌಕರ ವೆಂಕಟೇಗೌಡ(80) ಹೃದಯಾಘಾತದಿಂದ ನಿಧರಾದರು. ಮೃತರಿಗೆ ಪತ್ನಿ ಪುಷ್ಪ, ಓರ್ವ ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಸಂಸ್ಕಾರ ಸ್ವಗ್ರಾಮ ಕೆ.ಎಂ.ದೊಡ್ಡಿಯ ತಮ್ಮ ಜಮೀನಿನಲ್ಲಿ ಅ. ರ ಸೋಮವಾರ ಬೆಳಗ್ಗೆ 11 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.