ಮೀಸಲು ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಡವೆ ಸಾವು

| Published : Feb 12 2025, 12:30 AM IST

ಸಾರಾಂಶ

ರಸ್ತೆ ಬದಿಯಲ್ಲಿ ತೀವ್ರತರವಾಗಿ ಗಾಯಗೊಂಡು ಬಿದ್ದಿದ್ದ ಕಡವೆಯನ್ನು ಸಾರ್ವಜನಿಕರು ಉಪಚರಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಗಸ್ತು ಸಿಬ್ಬಂ ಕಡವೆಯನ್ನು ವೈದ್ಯರಿಂದ ಚಿಕಿತ್ಸೆ ಕೊಡಿಸುವ ಮೂಲಕ ಉಪಚರಿಸಿದ್ದರೂ ಕಡವೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಗರುಡನ ಉಕ್ಕಡದ ಬಳಿ ಮೀಸಲು ಅರಣ್ಯ ಪ್ರದೇಶದ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಕಡವೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದೆ.

ಗ್ರಾಮದ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮುಂಜಾನೆ ವೇಳೆ ಕಡವೆ ಹಾದು ಹೋಗುತ್ತಿದ್ದ ವೇಳೆ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆತಕ್ಕೆ ಪಾದಚಾರಿ ರಸ್ತೆ ಬಳಿ ಬಿದ್ದು ಕಡವೆ ಗಂಭೀರವಾಗಿ ಗಾಯಗೊಂಡಿದೆ.

ರಸ್ತೆ ಬದಿಯಲ್ಲಿ ತೀವ್ರತರವಾಗಿ ಗಾಯಗೊಂಡು ಬಿದ್ದಿದ್ದ ಕಡವೆಯನ್ನು ಸಾರ್ವಜನಿಕರು ಉಪಚರಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಗಸ್ತು ಸಿಬ್ಬಂ ಕಡವೆಯನ್ನು ವೈದ್ಯರಿಂದ ಚಿಕಿತ್ಸೆ ಕೊಡಿಸುವ ಮೂಲಕ ಉಪಚರಿಸಿದ್ದರೂ ಕಡವೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ನಂತರ ಕಡವೆಯ ಶರೀರವನ್ನು ವೈದ್ಯರಿಂದ ಪಂಚನಾಮೆ ನಡೆಸಿ ಅರಣ್ಯದಲ್ಲಿ ಮಣ್ಣು ಮಾಡಲಾಗಿದೆ ಎಂದು ಆರ್‌ಎಫ್‌ಒ ವಿನೋದ್ ಗೌಡ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿ ಶವ ಪತ್ತೆ

ಮದ್ದೂರು: ತಾಲೂಕಿನ ರುದ್ರಾಕ್ಷಿಪುರ ನಿಡಘಟ್ಟ ಮಧ್ಯೆ ಇರುವ ಕೆರೆ ಬಳಿ ಬೆಂಗಳೂರು ಮೈಸೂರ್ ಹೆದ್ದಾರಿ ರಸ್ತೆ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತ ಗಂಡಸಿಗೆ ಸುಮಾರು 30 ರಿಂದ 35 ವರ್ಷವಾಗಿದೆ. ಮೈಮೇಲೆ ಮಹಾರಾಷ್ಟ್ರ ರಾಜ್ಯದ ಚಾಂದ್ಗಡ್ ವಿಧಾನಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಸಿಂಬಲ್ ಇರುವ ಬಿಳಿ ಬಣ್ಣದ ತೋಳಿನಲ್ಲಿ ಹಳದಿ ಪಟ್ಟಿರುವ ಟೀ ಶರ್ಟ್, ಗ್ರೇ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಅಂಡರ್ವರ್ ಧರಿಸಿದ್ದಾನೆ. ಬಲಗೈನಲ್ಲಿ ಹೃದಯದ ಸಿಂಬಲ್ ಅದರ ಒಳಭಾಗದಲ್ಲಿ ಇಎಂ ಎಂಬ ಹಸಿರು ಹಚ್ಚೆಯಿದ್ದು, ಎಡಗೈ ಹೆಬ್ಬೆರಳಿನ ಬಳಿ ಆರ್ ಎಂಬ ಹಸಿರು ಅಚ್ಚೆ ಇದೆ. ಮೃತನ ತಲೆಯಲ್ಲಿ ಗಾಯಗಳು ಕಂಡು ಬಂದಿವೆ.

ವಾರಸುದಾರರು ಯಾರಾದರೂ ಇದ್ದಲ್ಲಿ ಮೊ-9480804869/ ದೂ08232-232170 ಅನ್ನು ಸಂಪರ್ಕಿಸಬಹುದು ಎಂದು ಮದ್ದೂರು ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ತಿಳಿಸಿದ್ದಾರೆ.