ಜಗಳ ಅತಿರೇಕಕ್ಕೆ ಹೋಗಿಗಂಡನ ಕಿವಿ ಕತ್ತರಿಸಿದ ಹೆಂಡತಿ!

| Published : Nov 30 2023, 01:15 AM IST

ಸಾರಾಂಶ

ಹೆಂಡತಿಯೇ ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ

ಗಂಡ ಹೆಂಡತಿ ಮಧ್ಯೆ ಜಗಳ ಸಾಮಾನ್ಯ. ಆದರೆ ಅದು ಅತಿರೇಕವಾಗಬಾರದು ಅಷ್ಟೆ. ಗಂಡನೇ ಹೆಂಡತಿಯನ್ನು ಥಳಿಸಿದ್ದ ಸಾಕಷ್ಟು ಪ್ರಕರಣದ ಬಗ್ಗೆ ಕೇಳಿರುತ್ತೀರಿ. ಆದರಿಲ್ಲಿ ಹೆಂಡತಿಯೇ ಗಂಡನ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಪತಿಯ ಬಲ ಕಿವಿಯ ಮೇಲ್ಭಾಗ ತುಂಡಾಗುವಂತೆ ಕಚ್ಚಿದ್ದಾಳೆ. ಬಳಿಕ ಪತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಪತ್ನಿ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾನೆ. ಈ ಘಟನೆ ನಡೆದಿದ್ದು ದೆಹಲಿಯ ಸುಲ್ತಾನ್‌ಪುರಿಯಲ್ಲಿ. ಮನೆ ಮಾರಿ ತನಗೆ ಪಾಲು ನೀಡುವಂತೆ ಹಾಗೂ ಇನ್ನಿತರ ವಿನಾಕಾರಣಗಳಿಗೆ ಪತ್ನಿ ಪತಿ ಜೊತೆ ಸುಮ್ಮನೆ ಜಗಳವಾಡುತ್ತಿದ್ದಳಂತೆ. ಇದೀಗ ಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.