ಸಾರಾಂಶ
ಬಲರಾಮನ ದಿನಗಳು ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಣಯನ್ ಕನ್ನಡಕ್ಕೆ ಬಂದಿದ್ದಾರೆ.
ವಿನೋದ್ ಪ್ರಭಾಕರ್ ನಟನೆಯ ‘ಬಲರಾಮನ ದಿನಗಳು’ ಚಿತ್ರದ ಮೂಲಕ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಕನ್ನಡಕ್ಕೆ ಬಂದಿದ್ದಾರೆ. ಅವರು ರಜನಿಕಾಂತ್ ನಟನೆಯ ‘ಕಾಲ’, ‘ಕಬಾಲಿ’, ಪ್ರಭಾಸ್ ನಟನೆಯ ‘ಕಲ್ಕಿ’ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಖ್ಯಾತಿ ಹೊಂದಿದ್ದಾರೆ. ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ನಿರ್ಮಾಣದ, ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.
ಸಂತೋಷ್ ನಾರಾಯಣನ್, ‘ನಾನು ಈ ಹಿಂದೆ ರಘು ದೀಕ್ಷಿತ್ ಅವರ ‘ಮಾದೇಶ್ವರ’ ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಕನ್ನಡದಲ್ಲಿ ಅಜನೀಶ್ ಲೋಕನಾಥ್, ರವಿ ಬಸ್ರೂರ್ ಸಂಗಿತ ನನಗೆ ಇಷ್ಟ. ಇದು ಕನ್ನಡದಲ್ಲಿ ನನ್ನ ಮೊದಲ ಸಿನಿಮಾ. ಒಟ್ಟಾರೆ 51ನೇ ಚಿತ್ರ’ ಎಂದರು.ವಿನೋದ್ ಪ್ರಭಾಕರ್, ‘ನಮ್ಮದು ಗ್ಯಾಂಗ್‍ಸ್ಟರ್ ಹಾಗೂ ಕಲ್ಟ್ ಚಿತ್ರ. ಅವರು ನಮ್ಮ ಚಿತ್ರದ ಕತೆ ಕೇಳಿ ಸಂಗೀತ ನೀಡಲು ಒಪ್ಪಿಕೊಂಡಿದ್ದಾರೆ’ ಎಂದರು. ಕೆ ಎಂ ಚೈತನ್ಯ, ‘ಇದು 90ರ ದಶಕದ ಭೂಗತ ಲೋಕದ ಕತೆ’ ಎಂದರು.