ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿದ್ದಾರೆ. ‘ದೃಶ್ಯಂ 2’ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು. ಇದೀಗ ಚಿತ್ರೀಕರಣ ಹಂತದಲ್ಲಿರುವ ‘ದೃಶ್ಯಂ 3’ ಸಿನಿಮಾದಲ್ಲೂ ಇವರು ಮುಖ್ಯಪಾತ್ರದಲ್ಲಿದ್ದರು. ಆದರೆ ಇದೀಗ ತಗಾದೆ ತೆಗೆದು ಸಿನಿಮಾದಿಂದ ಹೊರನಡೆದಿದ್ದಾರೆ.
ಸಿನಿವಾರ್ತೆ
ಮೂಲ ಮಲಯಾಳದ ‘ದೃಶ್ಯಂ’ ಸಿನಿಮಾ ಸರಣಿ ಬಾಲಿವುಡ್‌ಗೆ ರಿಮೇಕ್ ಆಗಿದೆ. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿದ್ದಾರೆ. ‘ದೃಶ್ಯಂ 2’ ಚಿತ್ರದ ಮುಖ್ಯಪಾತ್ರವೊಂದರಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು. ಇದೀಗ ಚಿತ್ರೀಕರಣ ಹಂತದಲ್ಲಿರುವ ‘ದೃಶ್ಯಂ 3’ ಸಿನಿಮಾದಲ್ಲೂ ಇವರು ಮುಖ್ಯಪಾತ್ರದಲ್ಲಿದ್ದರು. ಆದರೆ ಇದೀಗ ತಗಾದೆ ತೆಗೆದು ಸಿನಿಮಾದಿಂದ ಹೊರನಡೆದಿದ್ದಾರೆ.
ನಿಷ್ಠುರವಾಗಿ ಮಾತನಾಡಿರುವ ‘ದೃಶ್ಯಂ 3’ ನಿರ್ಮಾಪಕ
ಈ ಬಗ್ಗೆ ನಿಷ್ಠುರವಾಗಿ ಮಾತನಾಡಿರುವ ‘ದೃಶ್ಯಂ 3’ ನಿರ್ಮಾಪಕ ಕುಮಾರ್ ಮಂಗತ್ ಪಾಠಕ್, ‘ದೃಶ್ಯಂ 2 ಸಿನಿಮಾದಲ್ಲಿ ಅಕ್ಷಯ್ ಖನ್ನಾ ಪಾತ್ರಕ್ಕೆ ವಿಗ್ ಇರಲಿಲ್ಲ. ಮೂರನೇ ಭಾಗದಲ್ಲೂ ಆ ಪಾತ್ರದ ಮುಂದುವರಿಕೆ ಬೇಕಿತ್ತು. ಆದರೆ ಅಕ್ಷಯ್ ಖನ್ನಾ ವಿಗ್ ಹಾಕಿಯೇ ಆ ಪಾತ್ರ ಮಾಡುತ್ತೇನೆ ಎಂದು ಪಟ್ಟು ಹಿಡಿದರು. ಅವರಿಗೆ ಧುರಂಧರ್ ಯಶಸ್ಸು ತಲೆಗೇರಿದೆ. ನಮ್ಮ ಮಾತುಕತೆ ವಿಫಲವಾಗಿದೆ. ಅವರಿಗೆ ಲೀಗಲ್ ನೋಟಿಸ್ ಕಳಿಸಲಾಗಿದೆ’ ಎಂದಿದ್ದಾರೆ.
ಅಕ್ಷಯ್ ಖನ್ನಾ ಜಾಗಕ್ಕೆ ಜೈದೀಪ್ ಅಹ್ಲಾವತ್
ಅಕ್ಷಯ್ ಖನ್ನಾ ಜಾಗಕ್ಕೆ ‘ಫ್ಯಾಮಿಲಿ ಮ್ಯಾನ್ 3’ ಮೂಲಕ ಗಮನಸೆಳೆದ ಜೈದೀಪ್ ಅಹ್ಲಾವತ್ ಬಂದಿದ್ದಾರೆ.
