ಶೀಘ್ರ ಪಿಆರ್‌ಕೆ ಬ್ಯಾನರ್‌ನಿಂದ 2 ಸಿನಿಮಾ ಘೋಷಣೆ: ಅಶ್ವಿನಿ ಪುನೀತ್‌ರಾಜ್‌ಕುಮಾರ್‌

| Published : Apr 07 2024, 01:46 AM IST / Updated: Apr 07 2024, 06:22 AM IST

ಶೀಘ್ರ ಪಿಆರ್‌ಕೆ ಬ್ಯಾನರ್‌ನಿಂದ 2 ಸಿನಿಮಾ ಘೋಷಣೆ: ಅಶ್ವಿನಿ ಪುನೀತ್‌ರಾಜ್‌ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಶ್ವಿನಿ ಪುನೀತ್‌ ನಿರ್ಮಾಣದ ಓ2 ಸಿನಿಮಾ ಏ.19ಕ್ಕೆ ಬಿಡುಗಡೆಯಾಗಲಿದೆ.

ಸಿನಿವಾರ್ತೆ

‘ಓ2 ಚಿತ್ರ ಪುನೀತ್‌ ರಾಜ್‌ಕುಮಾರ್‌ ಒಪ್ಪಿಕೊಂಡ ಕೊನೆಯ ಸಿನಿಮಾ. ಇನ್ನು ಮೇಲಿನ ಪಿಆರ್‌ಕೆ ಬ್ಯಾನರ್‌ನ ಚಿತ್ರಗಳನ್ನೆಲ್ಲ ನಾನು ಮತ್ತು ನಮ್ಮ ತಂಡ ನಿರ್ಧರಿಸುತ್ತದೆ. ಶೀಘ್ರ ನಮ್ಮ ಬ್ಯಾನರ್‌ನಿಂದ ಎರಡು ಸಿನಿಮಾಗಳ ಘೋಷಣೆಯಾಗಲಿದೆ’ ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.

‘ಓ2’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಏ.19ಕ್ಕೆ ಓ2 ಸಿನಿಮಾ ಬಿಡುಗಡೆಯಾಗಲಿದೆ. ರಾಘವ ನಾಯಕ್‌ ಹಾಗೂ ಪ್ರಶಾಂತ್‌ ರಾಜ್‌ ಈ ಸಿನಿಮಾದ ನಿರ್ದೇಶಕರು. ಆಶಿಕಾ ರಂಗನಾಥ್‌, ಪ್ರವೀಣ್‌ ತೇಜ್‌ ನಟಿಸಿದ್ದಾರೆ.

ನಟ ಪ್ರವೀಣ್‌ ತೇಜ್‌, ‘ಈ ಸಿನಿಮಾ ಡೇಟ್‌ ಮುಂದೂಡಲ್ಪಟ್ಟಾಗ ಬೇರೆ ಸಿನಿಮಾ ಒಪ್ಪಿಕೊಂಡಿದ್ದೆ. ಅಷ್ಟೊತ್ತಿಗೆ ಮತ್ತೆ ಈ ಸಿನಿಮಾದಿಂದ ಕರೆಬಂತು. ಮತ್ತೊಂದು ಚಿತ್ರಕ್ಕೆ ಮೀಸೆ ಬೇಕಿತ್ತು. ಈ ಸಿನಿಮಾಕ್ಕೆ ಮೀಸೆ ಬೋಳಿಸಬೇಕಿತ್ತು. ಕೊನೆಗೆ ಪುನೀತ್‌ ಅವರು ನಾನೇ ಆ ಪಾತ್ರ ಮಾಡಬೇಕು ಎಂದು ಹೇಳಿದಾಗ ಬೇರೆ ಯೋಚಿಸದೇ ಮೀಸೆ ಬೋಳಿಸಿಯೇ ಬಿಟ್ಟೆ. ಇನ್ನೊಂದು ಚಿತ್ರ ನಿಂತೇ ಹೋಯಿತು. ಅದಕ್ಕೆ ಆ ಚಿತ್ರತಂಡದ ಕ್ಷಮೆ ಕೋರುವೆ’ ಎಂದರು.

ನಾಯಕಿ ಆಶಿಕಾ ರಂಗನಾಥ್‌, ‘ಕಮರ್ಷಿಯಲ್‌, ಗ್ಲಾಮರ್‌ ಪಾತ್ರಗಳ ನಡುವೆ ನಟನೆಗೆ ಆದ್ಯತೆ ಇರುವ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಶ್ರದ್ಧಾ ಎಂಬ ಡಾಕ್ಟರ್‌ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು.

ನಿರ್ದೇಶಕ ಪ್ರಶಾಂತ್‌ ರಾಜ್‌, ‘ಜೀವನಕ್ಕೆ ಪ್ರೀತಿಯೇ ಆಕ್ಸಿಜನ್‌ ಎಂಬುದು ಸಿನಿಮಾದ ಒನ್‌ಲೈನ್‌. ಇದು ಪುನೀತ್‌ ಅವರಿಗೂ ಇಷ್ಟವಾಗಿತ್ತು’ ಎಂದರು.

ಚಿತ್ರದಲ್ಲಿ ಓಶೋ ಎಂಬ ಪ್ರಮುಖ ಪಾತ್ರ ನಿರ್ವಹಿಸಿದ ಮತ್ತೋರ್ವ ನಿರ್ದೇಶಕ ರಾಘವ ನಾಯಕ್‌, ನಟ ಪುನೀತ್‌ ಬಿ ಎ ಸುದ್ದಿಗೋಷ್ಠಿಯಲ್ಲಿದ್ದರು.