ಯಶ್‌ ಮತ್ತೆ ‘ಟಾಕ್ಸಿಕ್‌’ ಸೆಟ್‌ ಸೇರಿಕೊಂಡಿದ್ದಾರೆ. ಮುಂಬೈಯ ಗೋರೆಗಾಂವ್‌ನ ಫಿಲಂ ಸಿಟಿಯಲ್ಲಿ ಹೈ ವೋಲ್ಟೇಜ್‌ ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದಾರೆ.

ಸಿನಿವಾರ್ತೆ

ಯಶ್‌ ಮತ್ತೆ ‘ಟಾಕ್ಸಿಕ್‌’ ಸೆಟ್‌ ಸೇರಿಕೊಂಡಿದ್ದಾರೆ. ಮುಂಬೈಯ ಗೋರೆಗಾಂವ್‌ನ ಫಿಲಂ ಸಿಟಿಯಲ್ಲಿ ಹೈ ವೋಲ್ಟೇಜ್‌ ಸಾಹಸ ದೃಶ್ಯದಲ್ಲಿ ಭಾಗಿಯಾಗಿದ್ದಾರೆ. ಕಠಿಣ ಸಾಹಸ ದೃಶ್ಯಗಳಲ್ಲೂ ಯಶ್‌ ಸ್ವತಃ ಅವರೇ ತೊಡಗಿಸಿಕೊಂಡಿದ್ದು, ಎಲ್ಲೂ ಡ್ಯೂಪ್‌ ಬಳಸಿಲ್ಲ ಎನ್ನಲಾಗಿದೆ.

ನಿರ್ದೇಶಕಿ ಗೀತು ಮೋಹನ್‌ದಾಸ್‌ ಸಾರಥ್ಯದಲ್ಲಿ ನಡೆಯುತ್ತಿರುವ ಶೂಟಿಂಗ್‌ನಲ್ಲಿ ಯಶ್‌ ಜೊತೆಗೆ ತಾರಾ ಸುತಾರಿಯಾ, ಹ್ಯೂಮಾ ಖುರೇಶಿ, ಅಕ್ಷಯ್‌ ಓಬೆರಾಯ್‌ ಪಾಲ್ಗೊಂಡಿದ್ದು, ಮೂರು ವಾರಗಳ ಕಾಲ ಈ ಶೆಡ್ಯೂಲ್‌ ಮುಂದುವರಿಯಲಿದೆ. 19 ಮಾರ್ಚ್‌ 2026ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.