ಸಾರಾಂಶ
ನಟಿ ಅಮೃತಾ ಅಯ್ಯಂಗಾರ್ ಡಾಲಿ ಧನಂಜಯ ಜೊತೆ ಜೀಬ್ರಾ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿವಾರ್ತೆ‘ ಹೊಯ್ಸಳ’ ಸಿನಿಮಾದಲ್ಲಿ ಧನಂಜಯ ಜೊತೆಗೆ ನಾಯಕಿಯಾಗಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಇದೀಗ ಧನಂಜಯ ನಟನೆಯ ತೆಲುಗು ಸಿನಿಮಾ ‘ಜೀಬ್ರಾ’ದಲ್ಲೂ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದರಲ್ಲಿ ಆರಾದಿಯಾ ಎಂಬ ಪಾತ್ರ ಅಮೃತಾ ಅವರದ್ದು. ಇಲ್ಲೂ ಧನಂಜಯಗೆ ಜೋಡಿಯಾಗಿ ಅಮೃತಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘ಜೀಬ್ರಾ’ದಲ್ಲಿ ಧನಂಜಯ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಆದಿ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ತೆಲುಗು ನಟ ಸತ್ಯದೇವ್ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಶ್ವರ್ ಕಾರ್ತಿಕ್ ನಿರ್ದೇಶನದ ಈ ಸಿನಿಮಾವನ್ನು ಬಾಲಾ ಸುಂದರಂ ನಿರ್ಮಿಸಿದ್ದಾರೆ. ನ.22ಕ್ಕೆ ಸಿನಿಮಾ ತೆರೆಗೆ ಬರಲಿದೆ.