ಸಾರಾಂಶ
ಲವ್ ಆ್ಯಂಡ್ ಲೆಟ್ ಲವ್ ಎಂಬ ಕಿರುಚಿತ್ರದಲ್ಲಿ ಚೈತ್ರಾ ಆಚಾರ್ ಲೆಸ್ಬಿಯನ್ ಹುಡುಗಿ ಪಾತ್ರ ಮಾಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
‘ಲವ್ ಆ್ಯಂಡ್ ಲೆಟ್ ಲವ್ ಎಂಬ ಕಿರುಚಿತ್ರ ಪ್ರೇಮಕ್ಕೆ ಹೊಸ ವ್ಯಾಖ್ಯಾನ ಕೊಡುವ ಚಿತ್ರ. ಇದರಲ್ಲಿ ನಾನು ಲೆಸ್ಬಿಯನ್ ಪಾತ್ರ ನಿರ್ವಹಿಸಿದ್ದೇನೆ. ಲೈಂಗಿಕ ಅಲ್ಪಸಂಖ್ಯಾತರ ಬದುಕಿನ ಬಗೆಗಿನ ಈ ಸಿನಿಮಾದಲ್ಲಿ ಡೈಲಾಗ್‌ಗಳಿಲ್ಲ. ಭಾವವೇ ಎಲ್ಲವನ್ನೂ ಸಂವಹನ ಮಾಡುತ್ತದೆ. ಈ ಸಿನಿಮಾದಲ್ಲಿ ನಟಿಸಿದ್ದು ಆತ್ಮತೃಪ್ತಿ ನೀಡಿದೆ’ ಎಂದು ಚೈತ್ರಾ ಆಚಾರ್ ಹೇಳಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ‘ನಾನು ಲೇಡೀಸ್’ ಸಿನಿಮಾದ ನಿರ್ದೇಶಕಿ ಶೈಲಜಾ ಪಡಿಂದಾಳ ಈ ‘ಲವ್ ಆ್ಯಂಡ್ ಲೆಟ್ ಲವ್’ ಕಿರುಚಿತ್ರ ನಿರ್ದೇಶಿಸಿದ್ದಾರೆ. ಖ್ಯಾತ ನಿರ್ದೇಶಕ ಪಾ ರಂಜಿತ್ ನೀಲಂ ಸೋಷಿಯಲ್ ಯೂಟ್ಯೂಬ್‌ನಲ್ಲಿ ಈ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ‘ಮಾಮಣ್ಣನ್’ ಚಿತ್ರದ ಪ್ರಮುಖ ಪಾತ್ರಧಾರಿ ಗೀತಾ ಕೈಲಾಸಂ, ನಿರ್ದೇಶಕಿ ಮಾಲಿನಿ ಜೀವರತ್ನಂ, ನಟ ಬೈಜು ಸಿ ಬಾಲನ್ ನಟಿಸಿದ್ದಾರೆ.