ಸಾರಾಂಶ
ನಟಿ ಕೀರ್ತಿ ಸುರೇಶ್ ಮದುವೆ ನಿಗದಿಯಾಗಿದೆ. ಬ್ಯುಸಿನೆಸ್‌ಮೆನ್ ಆಂಟನಿ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆಬಹುಭಾಷಾ ತಾರೆ ಕೀರ್ತಿ ಸುರೇಶ್ ವಿವಾಹದ ಶುಭ ಸಮಾಚಾರ ತಿಳಿಸಿದ್ದಾರೆ. ತನ್ನ ಬಾಲ್ಯದ ಗೆಳೆಯ, ಉದ್ಯಮಿ ಆ್ಯಂಟೊನಿ ತಟ್ಟಿಲ್ ಅವರ ಜೊತೆಗೆ ಡಿ.11 ಹಾಗೂ ಡಿ.12ರಂದು ಗೋವಾದಲ್ಲಿ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಆ್ಯಂಟೊನಿ ಹಾಗೂ ಕೀರ್ತಿ ಸುರೇಶ್ ಸಹಪಾಠಿಗಳಾಗಿದ್ದು, ಒಟ್ಟಿಗೆ ಹೈಸ್ಕೂಲ್ ಓದಿದ್ದಾರೆ. ಆಗಿನಿಂದಲೂ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಆತ್ಮೀಯರಷ್ಟೇ ಈ ವಿವಾಹದಲ್ಲಿ ಭಾಗಿಯಾಗಲಿದ್ದಾರೆ. ನಂತರ ಕೊಚ್ಚಿ ಹಾಗೂ ಮುಂಬೈನಲ್ಲಿ ಅದ್ದೂರಿ ಆರತಕ್ಷತೆ ನಡೆಯುವ ಸಾಧ್ಯತೆ ಇದೆ. ಆ್ಯಂಟೊನಿ ತಟ್ಟಿಲ್ ಕೊಚ್ಚಿಯವರಾಗಿದ್ದು, ಸದ್ಯ ದುಬೈನಲ್ಲಿ ನೆಲೆಸಿದ್ದಾರೆ.