ಮ್ಯಾಕ್ಸ್‌ ಥ್ರಿಲ್ಲರ್‌ ಸಿನಿಮಾ, ಅಭಿಮಾನಿಗಳಿಗೆ ಹಬ್ಬ: ಸಂಯುಕ್ತಾ ಹೊರನಾಡು

| Published : Jul 12 2024, 01:36 AM IST / Updated: Jul 12 2024, 05:52 AM IST

ಮ್ಯಾಕ್ಸ್‌ ಥ್ರಿಲ್ಲರ್‌ ಸಿನಿಮಾ, ಅಭಿಮಾನಿಗಳಿಗೆ ಹಬ್ಬ: ಸಂಯುಕ್ತಾ ಹೊರನಾಡು
Share this Article
  • FB
  • TW
  • Linkdin
  • Email

ಸಾರಾಂಶ

ಮ್ಯಾಕ್ಸ್‌ ಸಿನಿಮಾದ ಅನುಭವಗಳ ಬಗ್ಗೆ ಸಂಯುಕ್ತಾ ಹೊರನಾಡು ಮಾತನಾಡಿದ್ದಾರೆ.

- ‘ಮ್ಯಾಕ್ಸ್‌’ ಸೆಟ್‌ನಲ್ಲಿ ಸುದೀಪ್ ಅವರ ಕಾರ್ಯವೈಖರಿ ನೋಡಿ ಬಿಗ್‌ ಫ್ಯಾನ್‌ ಆಗಿಬಿಟ್ಟೆ. ಹಿಂದೆ ನಾನು ನಟಿಸಿದ್ದ ‘ಜಿಗರ್‌ಥಂಡ’ ಸಿನಿಮಾಕ್ಕೆ ಸುದೀಪ್‌ ಬಂಡವಾಳ ಹೂಡಿದ್ದರು. ಮೊದಲ ಸೀನ್‌ಗೆ ನಿರ್ದೇಶನವನ್ನೂ ಮಾಡಿದ್ದರು. ಅಲ್ಲಿ ಸುದೀಪ್‌ ನಿರ್ದೇಶನದ ಝಲಕ್‌ ಸಿಕ್ಕಿತ್ತು. ಆದರೆ ‘ಮ್ಯಾಕ್ಸ್‌’ ಗೆ ಬಂದರೆ ಈ ಸಿನಿಮಾದ ಕಣ ಕಣದಲ್ಲೂ ಇದ್ದರು. ಎಲ್ಲಿಯವರೆಗೆ ಅಂದರೆ ಫೈಟ್‌ ಮಾಸ್ಟರ್ಸ್‌ಗೆಲ್ಲ ತಾವೇ ಮೇಕಪ್‌ ಮಾಡುತ್ತಿದ್ದರು. ನನ್ನ ತಾತ ಮೇಕಪ್‌ ಕಲಾವಿದರು. ಸುದೀಪ್‌ ಇಲ್ಲಿ ಮೇಕಪ್‌ ಮಾಡುತ್ತಿದ್ದದ್ದು ನನಗೆ ಅವರನ್ನು ನೆನಪಿಸಿತು. ನನಗೂ ಕಲಿಯಬೇಕು ಎಂಬ ಸ್ಫೂರ್ತಿ ಬಂತು. ಇದಲ್ಲದೇ ಅವ್ರಿಗೆ ಸಿನಿಮಾಟೋಗ್ರಫಿ ಗೊತ್ತು. ಎಡಿಟಿಂಗ್‌ ಗೊತ್ತು. ಎಲ್ಲಾ ಗೊತ್ತು. ಅಪ್ಪಟ ಸಿನಿಮಾ ವ್ಯಾಮೋಹಿಯೊಬ್ಬ ಹೇಗಿರಬೇಕು ಎಂದರೆ ಧೈರ್ಯದಿಂದ ಸುದೀಪ್‌ ಹೆಸರು ಹೇಳಬಲ್ಲೆ.

- ಸುದೀಪ್‌ ಅವರನ್ನು ಸೆಟ್‌ನಲ್ಲಿ ಬಹಳ ಗೋಳು ಹೊಯ್ಕೊಳ್ತಿದ್ದೆ. ಕೂತಲ್ಲಿ ನಿಂತಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದೆ. ಸಿನಿಮಾ ಮೇಕಿಂಗ್‌ ಬಗ್ಗೆ, ಲೈಫಿನ ಬಗ್ಗೆ, ಅವರ ಬಗ್ಗೆ ಹೀಗೆ.. ಸಮಾಧಾನದಲ್ಲಿ ಉತ್ತರಿಸುತ್ತಿದ್ದರು. ಸಮಯ ಸಿಕ್ಕಾಗ ನಮಗೆಲ್ಲ ರಿಹರ್ಸಲ್‌ ಮಾಡಿಸುತ್ತಿದ್ದರು. ತಾವೂ ರಿಹರ್ಸಲ್‌ ಮಾಡುತ್ತಿದ್ದರು. ಸೆಟ್‌ಗೆ ಬರೋ ಮುಂಚೆ ವರ್ಕೌಟ್. ಅದಾದ ಮೇಲೆ ವರ್ಕೌಟ್‌. ಸಿನಿಮಾದಲ್ಲಿನ ಅವರ ಲುಕ್‌ ನೋಡಿದ್ರೆ ಗೊತ್ತಾಗುತ್ತೆ, ಪಾತ್ರಕ್ಕಾಗಿ ಅವರು ಬಹಳ ಪರಿಶ್ರಮ ಹಾಕಿದ್ದಾರೆ ಅನ್ನೋದು.

- ಅವರೊಳಗೊಬ್ಬ ಮಹಾ ಸಮಾಧಾನಿ ಇದ್ದಾನೆ. ಏನೇ ಆದ್ರೂ ಸೆಟ್‌ನಲ್ಲಿ ಅವರು ಸಿಟ್ಟು ಮಾಡಿಕೊಂಡಿದ್ದು ಕಂಡಿಲ್ಲ. ಮುಖದಲ್ಲಿ ಪರಮ ಶಾಂತತೆ. ಸ್ಟಾರ್‌ ಜೊತೆಗೆ ಕೆಲಸ ಮಾಡಿದಾಗ ಸಾಮಾನ್ಯವಾಗಿ ಯಾರ ಜೊತೆಗೋ ಅಪ್‌ಸೆಟ್‌ ಆಗೋದು, ಕೋಪ ಬರೋದು ಎಲ್ಲ ಕಾಮನ್‌. ಆದರೆ ಇವರು ಭಿನ್ನವಾಗಿದ್ದರು.

- ‘ಮ್ಯಾಕ್ಸ್‌’ ಒಂದು ಥ್ರಿಲ್ಲರ್‌. ಸುದೀಪ್‌ ಫ್ಯಾನ್ಸ್‌ಗೆ ಹಬ್ಬ. ಇದರಲ್ಲಿರೋ ಫೈಟ್‌ಗಳೋ ರಣರೋಚಕ. ಒಂದು ಕಡೆಯಂತೂ ಸುದೀಪ್‌ ಡಾನ್ಸ್‌ ಮಾಡ್ತಾರ ಫೈಟ್ ಮಾಡ್ತಾರ ಅಂತ ಗೊತ್ತಾಗದಷ್ಟು ಭರ್ಜರಿ ಮನರಂಜನೆಯ ಸೀನ್‌ಗಳಿವೆ.

- ಈ ಸಿನಿಮಾದ ನನ್ನ ಪಾತ್ರವನ್ನು ಈಗಲೇ ರಿವೀಲ್‌ ಮಾಡುವಂತಿಲ್ಲ. ಆದರೆ ಹೀರೋ ಪರವಾಗಿರುವ ಪಾತ್ರ ಎನ್ನಬಲ್ಲೆ. ‘ಜಾನ್ಸಿ’ ಅನ್ನೋ ತೆಲುಗು ವೆಬ್‌ಸೀರೀಸ್‌, ‘ಮಂಡೇಲ’ ಸಿನಿಮಾದ ಪೊಲೀಸ್‌ ಆಫೀಸರ್‌ ಪಾತ್ರಗಳನ್ನು ನೋಡಿ ಈ ಸಿನಿಮಾದ ಪಾತ್ರಕ್ಕೆ ಆಯ್ಕೆ ಮಾಡಿರಬಹುದು ಎಂಬುದು ನನ್ನ ಲೆಕ್ಕಾಚಾರ.