ಸಾರಾಂಶ
ನಟಿ ಸುಪ್ರೀತಾ ಸತ್ಯನಾರಾಯಣ ನಿಶ್ಚಿತಾರ್ಥ
ಸಿನಿವಾರ್ತೆ‘
ಸೀತಾವಲ್ಲಭ’ ಖ್ಯಾತಿಯ ಕಿರುತೆರೆ ಹಾಗೂ ಸಿನಿಮಾ ನಟಿ ಸುಪ್ರೀತಾ ಸತ್ಯನಾರಾಯಣ, ಕೊಡಗು ಮೂಲದ ಸಾಫ್ಟ್‌ವೇರ್ ಉದ್ಯೋಗಿ ಚಂದನ್ ಶೆಟ್ಟಿ ಜೊತೆಗೆ ಶೀಘ್ರ ವೈವಾಹಿಕ ಜೀವನಕ್ಕೆ ಅಡಿ ಇಡಲಿದ್ದಾರೆ.
ಸೋಷಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್‌ನ ಮುಖಾಂತರ ನಟಿ ತನ್ನ ನಿಶ್ಚಿತಾರ್ಥದ ಸಮಾಚಾರ ರಿವೀಲ್ ಮಾಡಿದ್ದಾರೆ. ‘ಹೊಸ ಅಧ್ಯಾಯ ಇಲ್ಲಿಂದ ಆರಂಭ.. ಮೊತ್ತ ಮೊದಲ ಬಾರಿ ನೀನು ಹೆಲೋ ಅಂದಾಗಲೇ ನಿನ್ನ ಜೊತೆ ಪ್ರೀತಿಯಲ್ಲಿ ಬಿದ್ದ ಬಗ್ಗೆ ಹೇಳಲಾ ಅಥವಾ ಪ್ರತೀ ಸಲ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟಂತಾಗುತ್ತಿದ್ದ ಬಗೆಯನ್ನು ವಿವರಿಸಲಾ.. ದೇವರಲ್ಲಿ ನಾನು ಸಂತೋಷವನ್ನು ಕೊಡು ಅಂದಾಗ ಅವನು ನಿನ್ನನ್ನು ಕೊಟ್ಟ’ ಎಂದು ಸುದೀರ್ಘ ನೋಟ್ ಅನ್ನು ಸುಪ್ರೀತಾ ಬರೆದುಕೊಂಡಿದ್ದಾರೆ.
ಸುಪ್ರೀತಾ ‘ರಹದಾರಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿ ಮುಂದೆ ‘ಮೆಲೋಡಿ ಡ್ರಾಮಾ’, ‘ಲಾಂಗ್ ಡ್ರೈವ್’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.