ಸಾರಾಂಶ
ಪೌರಾಣಿಕ ಪಾತ್ರಗಳ ಸ್ಫೂರ್ತಿಯಿಂದ ಫೋಟೋಶೂಟ್ ಮಾಡಿಸಿಕೊಂಡ ಸುಂದರಿಯರು
ಸಿನಿವಾರ್ತೆ
ಸೌತ್ ಸಿನಿಮಾ ಬೆಡಗಿಯರ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಸಂಸ್ಕೃತಿಯ ಗಂಧ ಇದ್ದೇ ಇರುತ್ತೆ. ಮಾಡರ್ನ್ ಡ್ರೆಸ್‌ನಲ್ಲೂ ಅವರು ನಮ್ಮ ನೆಲದ ಐಡೆಂಟಿಟಿಯನ್ನು ಬಿಟ್ಟು ಕೊಡೋದಿಲ್ಲ. ಇದರಲ್ಲಿ ಅದಿತಿ ರಾವ್ ಹೈದರಿ ಹಿಂದೆ ಬಿದ್ದವರಲ್ಲ. ಹೈದರಾಬಾದ್ ಮೂಲದ ಈ ನಟಿ ಈ ಬಾರಿ ರವಿವರ್ಮ ಪೇಂಟಿಂಗ್‌ನಂತೇ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಸಹ ಈ ಟ್ರೆಂಡ್ ಫಾಲೋ ಮಾಡಿದ್ದಾರೆ. ಜನಪದ ಮತ್ತು ಪೌರಾಣಿಕ ಸೊಗಡಿನ ಚೆಲುವೆಯಾಗಿ ಕಲರ್‌ಫುಲ್ ಫೋಟೋಗಳಲ್ಲಿ ಮಿಂಚಿದ್ದಾರೆ. ‘ಪಾರಂಪರಿಕೆ ಉಡುಗೆಗಳನ್ನು ತೊಟ್ಟರೆ ಅಮ್ಮ, ಅಜ್ಜಿಯರ ಮಡಿಲಲ್ಲಿರುವ ಬೆಚ್ಚನೆಯ ಫೀಲ್’ ಅನ್ನೋದು ಸಾಯಿ ಪಲ್ಲವಿಗೆ ಪಾರಂಪರಿಕ ಉಡುಗೆ ಮೇಲಿನ ಪ್ರೀತಿಯನ್ನು ಹೇಳುತ್ತೆ.
ಒಟ್ಟಾರೆ ಪರಂಪರೆಯಲ್ಲೇ ನಮ್ಮ ಅನನ್ಯತೆ ಇದೆ ಅಂತ ಈ ಪಾರಂಪರಿಕ ಉಡುಗೆ ಮೂಲಕ ಸೌತ್ ನಟಿಯರು ಹೇಳ ಹೊರಟ ಹಾಗಿದೆ.