ಅಜಯ್‌ ದೇವಗನ್‌ ಜೊತೆಗೆ ಜೋಗಿ ಪ್ರೇಮ್‌ ಸಿನಿಮಾ! ಬಾಲಿವುಡ್‌ ಸಿನಿಮಾ ಮಾಡಲು ತಯಾರಿ

| N/A | Published : Oct 16 2025, 01:14 PM IST

Jogi Prem
ಅಜಯ್‌ ದೇವಗನ್‌ ಜೊತೆಗೆ ಜೋಗಿ ಪ್ರೇಮ್‌ ಸಿನಿಮಾ! ಬಾಲಿವುಡ್‌ ಸಿನಿಮಾ ಮಾಡಲು ತಯಾರಿ
Share this Article
  • FB
  • TW
  • Linkdin
  • Email

ಸಾರಾಂಶ

ನಿರ್ದೇಶಕ ಜೋಗಿ ಪ್ರೇಮ್‌ ಅವರು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟ ಅಜಯ್‌ ದೇವಗನ್‌ ಅವರೊಂದಿಗೆ ಮಾತುಕತೆ ಮಾಡಿದ್ದು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ

  ಸಿನಿವಾರ್ತೆ

ನಿರ್ದೇಶಕ ಜೋಗಿ ಪ್ರೇಮ್‌ ಅವರು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ನಟ ಅಜಯ್‌ ದೇವಗನ್‌ ಅವರೊಂದಿಗೆ ಮಾತುಕತೆ ಮಾಡಿದ್ದು, ಅಲ್ಲಿನ ಕೆಲ ನಿರ್ಮಾಣ ಸಂಸ್ಥೆಗಳ ಜೊತೆಗೂ ಮಾತುಕತೆ ಮಾಡಿದ್ದಾರೆ. ಸದ್ಯದಲ್ಲೇ ಈ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಸದ್ಯ ಪ್ರೇಮ್‌ ನಿರ್ದೇಶನ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ತೆರೆಗೆ ಬರಬೇಕಿದೆ. ಈ ನಡುವೆ ಅವರು ಹೊಸ ಚಿತ್ರದ ಸ್ಟ್ರಿಪ್ಟ್‌ ಪೂಜೆಯನ್ನು ಇತ್ತೀಚೆಗೆ ಮಾಡಿದ್ದರು. ಅದರ ಬೆನ್ನಲ್ಲೇ ಅವರು ಬಾಲಿವುಡ್‌ ಪ್ರವೇಶಿಸುತ್ತಿರುವ ಸುದ್ದಿ ಬಂದಿದೆ. ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

 

Read more Articles on