ಕೆಡಿ ಸಿನಿಮಾದ ಸತ್ಯವತಿಯ ಪಾತ್ರ ತನ್ನ ಕೆರಿಯರ್‌ನಲ್ಲೇ ವಿಶೇಷವಾದುದು ಎಂದು ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

 ಸಿನಿವಾರ್ತೆ

ಧ್ರುವ ಸರ್ಜಾ, ರೀಷ್ಮಾ ನಾಣಯ್ಯ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸತ್ಯವತಿ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣದ ಕೊನೆಯ ದಿನ ನಿರ್ದೇಶಕ ಪ್ರೇಮ್‌ ಅವರನ್ನು ಶಿಲ್ಪಾ ಶೆಟ್ಟಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

‘ಪ್ರೇಮ್‌ ಪರ್ಫೆಕ್ಷನಿಸ್ಟ್. ಅವರು ಅಂದುಕೊಂಡ ಶಾಟ್‌ ತೆಗೆಯೋವರೆಗೂ ಬಿಡಲ್ಲ. ನಾನು ಅವರಲ್ಲಿ ಗಮನಿಸಿದ ಇನ್ನೊಂದು ವಿಶೇಷ ಅಂದರೆ ಅವರಿಗೆ ಹಸಿವಾಗೋದೇ ಇಲ್ಲ. ಈ ಸಿನಿಮಾದ ಸತ್ಯವತಿ ಪಾತ್ರ ಕೆರಿಯರ್‌ನಲ್ಲೇ ವಿಶಿಷ್ಟವಾದುದು. ಕೆಡಿ ಸಿನಿಮಾ ಅದ್ಭುತವಾಗಿದೆ. ನನ್ನ ಇಷ್ಟದ ಸಿನಿಮಾಗಳಲ್ಲಿ ಇದೂ ಒಂದು’ ಎಂದು ಶಿಲ್ಪಾ ಹೇಳಿದ್ದಾರೆ.

ಆಗಸ್ಟ್‌ 16ರಂದು ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ. ಡಿಸೆಂಬರ್​ನಲ್ಲಿ ಸಿನಿಮಾ ತೆರೆ ಕಾಣಲಿದೆ.