ಸಾರಾಂಶ
ಸಂದೀಪ್ ರೆಡ್ಡಿವಂಗ ನಿರ್ದೇಶನದ ‘ಸ್ಪಿರೀಟ್’ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2’ ಚಿತ್ರಗಳಿಂದ ಔಟ್ ಆಗಿರುವ ದೀಪಿಕಾ ಪಡುಕೋಣೆ ಅವರ ಜಾಗವನ್ನು ಅಲಿಯಾ ಭಟ್ ಕಬ್ಜ ಮಾಡಿಲಿದ್ದಾರೆ
ಸಿನಿವಾರ್ತೆ
ಸಂದೀಪ್ ರೆಡ್ಡಿವಂಗ ನಿರ್ದೇಶನದ ‘ಸ್ಪಿರೀಟ್’ ಹಾಗೂ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2’ ಚಿತ್ರಗಳಿಂದ ಔಟ್ ಆಗಿರುವ ದೀಪಿಕಾ ಪಡುಕೋಣೆ ಅವರ ಜಾಗವನ್ನು ಅಲಿಯಾ ಭಟ್ ಕಬ್ಜ ಮಾಡಿಲಿದ್ದಾರೆ. ಅಂದರೆ ‘ಕಲ್ಕಿ 2’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ ಆಗಲಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿವೆ.
ಈಗಾಗಲೇ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಚಿತ್ರದ ಮೂಲಕ ಟಾಲಿವುಡ್ ಜೊತೆಗೆ ಜಾಗತಿಕ ಸಿನಿಮಾ ಜಗತ್ತಿಗೆ ಪರಿಚಯ ಆಗಿರುವ ಆಲಿಯಾ ಭಟ್ ಅವರೇ ‘ಕಲ್ಕಿ 2’ ಚಿತ್ರಕ್ಕೆ ಸೂಕ್ತ ಎನ್ನುವ ನಿರ್ಧಾರಕ್ಕೆ ನಾಗ್ ಅಶ್ವಿನ್ ಬಂದಿದ್ದಾರಂತೆ.
ಈಗಾಗಲೇ ಸೀತೆಯಾಗಿ ‘ಆರ್ ಆರ್ ಆರ್’ ಚಿತ್ರದಲ್ಲಿ ಗ್ಲೋಬಲ್ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ಆಲಿಯಾ ಭಟ್, ‘ಕಲ್ಕಿ 2’ ಚಿತ್ರದಲ್ಲಿ ಸುಮತಿ ಪಾತ್ರ ಮಾಡಲಿದ್ದು, ಆ ಮೂಲಕ ದೀಪಿಕಾ ಜಾಗವನ್ನು ಮತ್ತೊಬ್ಬ ಬಾಲಿವುಡ್ ನಟಿ ಕಬಳಿಸಲಿದ್ದಾರೆ.