ಕಲ್ಕಿ ಸೀಕ್ವೆಲ್‌ನಿಂದ ದೀಪಿಕಾ ಪಡುಕೋಣೆ ಔಟ್

| N/A | Published : Sep 19 2025, 12:00 PM IST

Deepika Padukone Kalki 2 exit

ಸಾರಾಂಶ

ಈ ಹಿಂದೆ ಪ್ರಭಾಸ್‌ ನಟನೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್‌’ ಸಿನಿಮಾದಿಂದ ಹೊರ ಬಿದ್ದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಪ್ರಭಾಸ್‌ ನಟನೆಯ ‘ಕಲ್ಕಿ 2898’ ಸಿನಿಮಾದಿಂದಲೂ ಔಟ್‌ ಆಗಿದ್ದಾರೆ.

ಈ ಹಿಂದೆ ಪ್ರಭಾಸ್‌ ನಟನೆ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್‌’ ಸಿನಿಮಾದಿಂದ ಹೊರ ಬಿದ್ದಿದ್ದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇದೀಗ ಪ್ರಭಾಸ್‌ ನಟನೆಯ ‘ಕಲ್ಕಿ 2898’ ಸಿನಿಮಾದಿಂದಲೂ ಔಟ್‌ ಆಗಿದ್ದಾರೆ.

ನಾಗ್‌ ಅಶ್ವಿನ್‌ ನಿರ್ದೇಶನದ ‘ಕಲ್ಕಿ 2898’ ಸಿನಿಮಾದ ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಎರಡನೇ ಭಾಗದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. ಆದರೆ ಈ ಪಾತ್ರದಿಂದ ಅವರನ್ನು ತೆಗೆದುಹಾಕಲಾಗಿದೆ ಎಂದು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್‌ ಅಧಿಕೃತವಾಗಿ ಪ್ರಕಟಿಸಿದೆ.

‘ದೀಪಿಕಾ ಪಡುಕೋಣೆ ಕಲ್ಕಿ2898 ಎಡಿ ಸಿನಿಮಾದ ಸೀಕ್ವೆಲ್‌ನಲ್ಲಿ ಮುಂದುವರಿಯುತ್ತಿಲ್ಲ. ಎಚ್ಚರಿಕೆಯಿಂದ ಎಲ್ಲಾ ವಿಷಯಗಳನ್ನು ಪರಿಗಣಿಸಿದ ನಂತರ, ನಾವು ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದೇವೆ. ‘ಕಲ್ಕಿ 2898 ಎಡಿ3’ ಸಿನಿಮಾ ಹೆಚ್ಚಿನ ಶ್ರಮ, ಶ್ರದ್ಧೆ ಬೇಡುತ್ತದೆ. ದೀಪಿಕಾ ಅವರ ಭವಿಷ್ಯದ ಸಿನಿಮಾಗಳಿಗೆ ಶುಭ ಕೋರುತ್ತೇವೆ’ ಎಂದು ಟ್ವೀಟ್‌ ಮಾಡಿದೆ.

Read more Articles on