ಟ್ರೆಂಡಿಂಗ್‌ನಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ ಹೊಸ ಲುಕ್‌

| Published : Jun 21 2024, 01:01 AM IST / Updated: Jun 21 2024, 05:18 AM IST

ಟ್ರೆಂಡಿಂಗ್‌ನಲ್ಲಿ ಗರ್ಭಿಣಿ ದೀಪಿಕಾ ಪಡುಕೋಣೆ ಹೊಸ ಲುಕ್‌
Share this Article
  • FB
  • TW
  • Linkdin
  • Email

ಸಾರಾಂಶ

ದೀಪಿಕಾ ಪಡುಕೋಣೆ ಬೇಬಿ ಬಂಪ್‌ ಲುಕ್‌ ಎಲ್ಲೆಡೆ ಟ್ರೆಂಡಿಂಗ್‌ನಲ್ಲಿದೆ.

ಪ್ರಭಾಸ್‌, ದೀಪಿಕಾ ಪಡುಕೋಣೆ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಮುಂದಿನ ವಾರ ಅಂದರೆ ಜೂ.27ಕ್ಕೆ ಬಿಡುಗಡೆಯಾಗಲಿದೆ. ಮುಂಬೈಯಲ್ಲಿ ಈ ಸಿನಿಮಾದ ಪ್ರಿ ರಿಲೀಸ್‌ ಈವೆಂಟ್‌ ನಡೆಯಿತು. ಈ ವೇಳೆ ಗರ್ಭಿಣಿ ದೀಪಿಕಾ ಪಡುಕೋಣೆ ಲುಕ್‌ ಟ್ರೆಂಡಿಂಗ್‌ ಆಗಿದೆ.

ಈ ಸಂದರ್ಭ ದೀಪಿಕಾ ತನ್ನ ಹೊಟ್ಟೆಯನ್ನು ತೋರಿಸಿ, ‘ಇದಕ್ಕೆ ಪ್ರಭಾಸ್‌ ಕಾರಣ’ ಎಂದಿದ್ದೂ ವೈರಲ್‌ ಆಗಿದೆ. ‘ಪ್ರಭಾಸ್‌ ಕಲ್ಕಿ ಸಿನಿಮಾ ಶೂಟಿಂಗ್‌ ವೇಳೆ ತಮ್ಮ ಮನೆಯಿಂದಲೇ ಊಟ ತರಿಸಿ ಕೊಡುತ್ತಿದ್ದರು. ಆ ರುಚಿಕರ ಭೋಜನ ಮಾಡಿ ನನಗೆ ಹೊಟ್ಟೆ ಬಂದಿದೆ’ ಎಂದು ಡಿಪ್ಪಿ ಜೋಕ್‌ ಹಾರಿಸಿದ್ದಾರೆ.ಈವೆಂಟ್‌ನಲ್ಲಿ ದೀಪಿಕಾ ಧರಿಸಿದ ಬಾಡಿಕಾರ್ನ್‌ ಉಡುಗೆಯ ಬೆಲೆ 1,14,000 ರು. ಎಂದು ಅಂದಾಜಿಸಲಾಗಿದೆ.