ಸ್ಮೈಲ್‌ ಗುರು ರಕ್ಷಿತ್‌ ಹಾಗೂ ಅಮೃತಾ ಪ್ರೇಮ್‌ ನಟನೆಯ ಅಮ್ಮು ಸಿನಿಮಾ ಶೀರ್ಷಿಕೆ ಅನಾವರಣ

| Published : Sep 13 2024, 01:49 AM IST / Updated: Sep 13 2024, 07:34 AM IST

ಸಾರಾಂಶ

ಸ್ಮೈಲ್‌ ಗುರು ರಕ್ಷಿತ್‌ ಹಾಗೂ ಅಮೃತಾ ಪ್ರೇಮ್‌ ನಟನೆಯ ಅಮ್ಮು ಸಿನಿಮಾ ಶೀರ್ಷಿಕೆ ಅನಾವರಣಗೊಂಡಿದೆ.

ಸ್ಮೈಲ್ ಗುರು ರಕ್ಷಿತ್, ಅಮೃತಾ ಪ್ರೇಮ್, ಜೆರುಶಾ ನಟನೆಯ ‘ಅಮ್ಮು’ ಸಿನಿಮಾದ ಟೈಟಲ್ ಅನ್ನು ವಿಭಿನ್ನವಾಗಿ ರಿವೀಲ್ ಮಾಡಲಾಗಿದೆ. ಪುದುಚೇರಿಯಲ್ಲಿ ಸ್ಕ್ಯೂಬಾ ಡೈವಿಂಗ್ ಮೂಲಕ 82 ಅಡಿ ಸಮುದ್ರದ ಆಳಕ್ಕಿಳಿದು ಚಿತ್ರತಂಡ ಶೀರ್ಷಿಕೆ ಅನಾವರಣ ಮಾಡಿದೆ. ಮಹೇಶ್ ಬಾಬು ಈ ಸಿನಿಮಾದ ನಿರ್ದೇಶಕರು.

ಮಹೇಶ್ ಬಾಬು, ‘ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ರೋಮಾಂಚನವಾಯಿತು. ರಕ್ಷಿತ್‌ ಪ್ರತಿಭೆಗೆ ದೊಡ್ಡ ಚಪ್ಪಾಳೆ ಸಿಗಬೇಕಿದೆ’ ಎಂದರು.

ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ‘ನಾನು ಬ್ಯಾಕ್‌ಗ್ರೌಂಡ್ ಡ್ಯಾನ್ಸರ್. ಸ್ಟೇಜ್‌ ಮೇಲೆ ಕುಣಿದರೂ ಬಿಗ್‌ಸ್ಕ್ರೀನ್‌ ಮೇಲೆ ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಅದೂ ವರ್ಕೌಟ್ ಆಗಲಿಲ್ಲ. ಆ ಹಠದಲ್ಲಿ ‘ಸ್ಮೈಲ್ ಗುರು’ ಶಾರ್ಟ್ ಮೂವಿ ಮಾಡಿದೆ. ಅದು ಹೆಸರು ತಂದಿತು. ಸಿನಿಮಾ ನನ್ನ ದೊಡ್ಡ ಕನಸು, ಇದಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದರು.ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ನಿರ್ಮಾಪಕರು.