‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ.’ - ಇದು ಆ್ಯಂಕರ್‌ ಅನುಶ್ರೀ ಮದುವೆಯ ಕರೆಯೋಲೆಯಲ್ಲಿರುವ ಸವಿನುಡಿ

 ಸಿನಿವಾರ್ತೆ

‘ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ.’

- ಇದು ಆ್ಯಂಕರ್‌ ಅನುಶ್ರೀ ಮದುವೆಯ ಕರೆಯೋಲೆಯಲ್ಲಿರುವ ಸವಿನುಡಿ. ಎಲ್ಲಿ ಹೋದರಲ್ಲಿ ಎದುರಾಗುತ್ತಿದ್ದ ಮದುವೆ ಬಗೆಗಿನ ಪ್ರಶ್ನೆಗೆ ಅನುಶ್ರೀ ಕೊನೆಗೂ ಹೀಗೆ ಉತ್ತರಿಸಿದ್ದಾರೆ.

ಆಗಸ್ಟ್ 28ರಂದು ಬೆಳಗ್ಗೆ 10.56ಕ್ಕೆ ನಡೆಯುವ ಮುಹೂರ್ತದಲ್ಲಿ ಅವರು ಉದ್ಯಮಿ ರೋಷನ್‌ ಅವರನ್ನು ವರಿಸಲಿದ್ದಾರೆ. ಬೆಂಗಳೂರು ಹೊರವಲಯದ ರೆಸಾರ್ಟಿನಲ್ಲಿ ವಿವಾಹ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ರೋಷನ್‌ ಕೊಡಗು ಮೂಲದ ರಾಮಮೂರ್ತಿ ಎಂಬವರ ಪುತ್ರ. ಉದ್ಯಮಿಯಾಗಿದ್ದು, ಪುನೀತ್‌ ರಾಜ್‌ಕುಮಾರ್‌ ಅವರ ಆಪ್ತರಾಗಿದ್ದರು ಎನ್ನಲಾಗಿದೆ.