ಕೆಜಿಎಫ್ ಕುರಿತ ಮತ್ತೊಂದು ಸಿನಿಮಾ ತಂಗಲಾನ್

| Published : Jul 11 2024, 01:33 AM IST / Updated: Jul 11 2024, 04:55 AM IST

ಸಾರಾಂಶ

ಕೆಜಿಎಫ್ ಕುರಿತ ಕತೆ ಹೊಂದಿರುವ ಮತ್ತೊಂದು ಸಿನಿಮಾ ತಂಗಲಾನ್ ಟ್ರೇಲರ್ ಬಿಡುಗಡೆ ಆಗಿದೆ ಮತ್ತು ಟ್ರೆಂಡಿಂಗ್ ಆಗಿದೆ.

  ಸಿನಿವಾರ್ತೆ

ಕೆಜಿಎಫ್‌ ಕುರಿತ, ಬಂಗಾರದ ಮಣ್ಣಿನ ಕುರಿತ ಮತ್ತೊಂದು ಸಿನಿಮಾ ಬರುತ್ತಿದೆ. ಅದರ ಹೆಸರು ‘ತಂಗಲಾನ್‌’. ತಮಿಳಿನ ಖ್ಯಾತ ನಿರ್ದೇಶಕ ಪ. ರಂಜಿತ್‌ ನಿರ್ದೇಶನದ, ಚಿಯಾನ್‌ ವಿಕ್ರಮ್‌ ನಟನೆಯ ಈ ಪ್ಯಾನ್‌ ಇಂಡಿಯಾ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

‘ತಂಗಲಾನ್‌’ ಸಿನಿಮಾ ಕತೆ ಕೆಜಿಎಫ್‌ನಲ್ಲಿ ನಡೆಯುತ್ತದೆ. ಅಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಮಂದಿ ಮತ್ತು ಅಲ್ಲಿಗೆ ಚಿನ್ನ ತೆಗೆದುಕೊಂಡು ಹೋಗಲು ಬರುವ ಬ್ರಿಟಿಷರ ಹೋರಾಟವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಸಿನಿಮಾ ತಂಡ ಇದು 200 ವರ್ಷಗಳ ಹಿಂದಿ ನೈಜ ಕತೆ ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿರುವುದರಿಂದ ಕೆಜಿಎಫ್‌ ಕುರಿತ ಕುತೂಹಲ ಹೆಚ್ಚಾಗಿದೆ. ಚಿನ್ನದ ಮಣ್ಣಿನ ಕತೆಯುಳ್ಳ ಸಿನಿಮಾವನ್ನು ಅದ್ದೂರಿಯಾಗಿ ರೂಪಿಸಲಾಗಿದ್ದು, ಇದು ಪ.ರಂಜಿತ್‌ ಮತ್ತು ವಿಕ್ರಮ್‌ ಅ‍ವರ ಬೆಸ್ಟ್‌ ಸಿನಿಮಾ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ವಿಕ್ರಮ್‌ಗೆ ಆಸ್ಕರ್‌ ಬಂದರೂ ಅಚ್ಚರಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.

‘ತಂಗಲಾನ್‌’ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ ಎನ್ನಲಾಗಿದೆ..