ನನ್ನ ಅಪ್ಪನೇ ನನ್ನ ಹೀರೋ : ನೆನಪಿರಲಿ ಪ್ರೇಮ್‌

| Published : Apr 07 2024, 01:50 AM IST / Updated: Apr 07 2024, 06:19 AM IST

ಸಾರಾಂಶ

ಅಪ್ಪನ ಪ್ರೀತಿಯ ಕುರಿತಾಗಿ ಬಂದಿರುವ ಸಿನಿಮಾ ಅಪ್ಪಾ ಐ ಲವ್‌ ಯೂ ಏ.12ಕ್ಕೆ ಬಿಡುಗಡೆ

 ಸಿನಿವಾರ್ತೆ

‘ಸಾಮಾನ್ಯವಾಗಿ ತಂದೆ ಎಲ್ಲರಿಗೂ ಹೀರೋ. ಎಷ್ಟೇ ಬಲಹೀನ ಅಗಿದ್ದರೂ, ರಸ್ತೆಯಲ್ಲಿ ಹೊಡೆದಾಡಿದರೂ ಮಕ್ಕಳ ಬಾಯಲ್ಲಿ ಬರುವ ಮಾತು - ಅಪ್ಪನಿಗೆ ಹೇಳ್ತೀನಿ. ನನಗೂ ನನ್ನ ತಂದೆ ಹೀರೋ. ಚಿಕ್ಕವನಾಗಿದ್ದಾಗ ಇದ್ದಾಗ ಎಲ್ಲಾ ರೀತಿಯ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ಅಪ್ಪ ಎಂದಿಗೂ ನನ್ನನ್ನು ಅನುಮಾನಿಸಲಿಲ್ಲ. ನನ್ನ ಮಗ ಏನು ಅಂತ ನಂಗೊತ್ತು‌ ಎನ್ನುತ್ತಿದ್ದರು. ಹೀಗಾಗಿ ನಾನು ಕೆಟ್ಟ ದಾರಿ ತುಳಿಯಲಿಲ್ಲ. ಅಪ್ಪನ ಪ್ರೀತಿ ನೆನೆಯುವ ಈ ಚಿತ್ರದಲ್ಲಿ ನನ್ನದು ಅದ್ಭುತ ಪಾತ್ರ’ ಎಂದರು. 

ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ‘ಇದು ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮರೆತುಬಿಟ್ಟಿರುತ್ತೇವೆ. ಆದರೆ ನಾವು ಅದನ್ನು ಅನುಭವಿಸುತ್ತಿರುತ್ತೇವೆ. ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆಮೇಲೆ ತರಬೇಕು ಎಂದು ಈ ಸಿನಿಮಾದ ಕಥೆಯನ್ನು ಆಯ್ಕೆ‌ ಮಾಡಿಕೊಂಡೆವು. ಕಥೆ ಹುಟ್ಟಲು ತಬಕಾ ನಾಣಿ ಅವರು ಮೂಲ ಕಾರಣ’ ಎಂದರು. ನಟ, ನಿರ್ಮಾಪಕ ತಬಲಾ ನಾಣಿ ಸುದ್ದಿಗೋಷ್ಠಿಯಲ್ಲಿದ್ದರು.

ಕೆಆರ್‌ಎಸ್‌ ಪ್ರೊಡಕ್ಷನ್ಸ್ ಈ ಚಿತ್ರ ನಿರ್ಮಿಸುತ್ತಿದೆ.

ಮಾನ್ವಿತಾ ಕಾಮತ್‌ ನಾಯಕಿ. ಸಂಜಯ್, ಜೀವಿತಾ, ರಂಗಿತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ನಟಿಸಿದ್ದಾರೆ.

ಆಕಾಶ್ ಪರ್ವ ಸಂಗೀತ, ನಾಗಾರ್ಜುನ್ ಆರ್.ಡಿ. ಛಾಯಾಗ್ರಹಣವಿದೆ.