ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಕಿರಿಯ ಪುತ್ರಿ ವಂದಿತಾ ಇದೀಗ ಬೇಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಪ್ರೀತಿಯಿಂದ ವಂದಿತಾ ಅವರನ್ನು ಕರೆಯುತ್ತಿದ್ದ ‘ನುಕ್ಕಿ’ ಎಂಬ ಹೆಸರನ್ನಿಟ್ಟುಕೊಂಡು ‘ನುಕಾಸ್’ ಆನ್‌ಲೈನ್ ಕೆಫೆ ತೆರೆದಿದ್ದಾರೆ.
ವಂದಿತಾ ಇದೀಗ ಬೇಕಿಂಗ್ ಕ್ಷೇತ್ರಕ್ಕೆ
ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಕಿರಿಯ ಪುತ್ರಿ ವಂದಿತಾ ಇದೀಗ ಬೇಕಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಅಪ್ಪು ಪ್ರೀತಿಯಿಂದ ವಂದಿತಾ ಅವರನ್ನು ಕರೆಯುತ್ತಿದ್ದ ‘ನುಕ್ಕಿ’ ಎಂಬ ಹೆಸರನ್ನಿಟ್ಟುಕೊಂಡು ‘ನುಕಾಸ್’ ಆನ್‌ಲೈನ್ ಕೆಫೆ ತೆರೆದಿದ್ದಾರೆ.
ಕೇಕ್‌ಗಳು, ಬಿಸ್ಕೆಟ್‌ಗಳು, ತಿರಮಿಸು, ಬ್ರೆಡ್, ಬ್ರೌನಿ
ನಾನಾ ಮಾದರಿಯ ಕೇಕ್‌ಗಳು, ಬಿಸ್ಕೆಟ್‌ಗಳು, ತಿರಮಿಸು, ಬ್ರೆಡ್, ಬ್ರೌನಿ ಸೇರಿ ಹಲವು ಐಟಂಗಳು ಇದರಲ್ಲಿವೆ.
ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ಗ್ರಾಮಾಯಣ ಸಿನಿಮಾ ಬಿಡುಗಡೆ ಸಂದರ್ಭ ವಂದಿತಾ ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ದರು. ತನ್ನ ಪ್ರಿಯ ಹವ್ಯಾಸವಾದ ಬೇಕಿಂಗ್ ಅನ್ನು ವಂದಿತಾ ಇದೀಗ ಉದ್ಯಮದ ಹಂತಕ್ಕೆ ಏರಿಸಿದ್ದಾರೆ. ಆರ್ಡರ್ ಬಂದಾಗ ತನ್ನ ಕೈಯಾರ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಾರೆ.