ಸಾರಾಂಶ
ಮುದುಡಿದ ಎಲೆಗಳು ಸಿನಿಮಾ ಮೂಲಕ ಟಾಲಿವುಡ್ ನಟಿ ಅಪ್ಸರಾ ಸ್ಯಾಂಡಲ್‌ವುಡ್ ಎಂಟ್ರಿ
ಕನ್ನಡಪ್ರಭ ಸಿನಿವಾರ್ತೆಟಾಲಿವುಡ್ ನಟಿ ಅಪ್ಸರಾ ರಾಣಿ ಇದೀಗ ಎಂ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ ‘ಮುದುಡಿದ ಎಲೆಗಳು’ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕೆಮಿಸ್ಟ್ರಿ ಟೀಚರ್ ಪಾತ್ರದಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡೊಂದರ ಮೂಲಕ ಇವರ ಲುಕ್ ರಿವೀಲ್ ಆಗಿದೆ.ಈ ಹಾಡಿನ ಚಿತ್ರೀಕರಣ ಇತ್ತೀಚೆಗೆ ನಡೆದಿದ್ದು, ಭಜರಂಗಿ ಮೋಹನ್ ಈ ನೃತ್ಯ ಸಂಯೋಜಿಸಿದ್ದಾರೆ. ರಂಜಿತ್ ಕುಮಾರ್ ಚಿತ್ರದ ನಾಯಕ. ಪಂಕಜ್ ನಾರಾಯಣ್, ಪಾವನ ಗೌಡ, ನಿಕಿತಾ ಸ್ವಾಮಿ, ಸೂರ್ಯದರ್ಶನ್, ಪ್ರೀತಿ ತಾರಾಬಳಗದಲ್ಲಿದ್ದಾರೆ.