ಆರಾಮ್‌ ಅರವಿಂದ್‌ ಸ್ವಾಮಿ ಚಿತ್ರದ ಟಿಕೆಟ್‌ ದರ ರು.99 : ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿ ತೆರೆಗೆ

| Published : Nov 07 2024, 11:59 PM IST / Updated: Nov 08 2024, 05:29 AM IST

ಆರಾಮ್‌ ಅರವಿಂದ್‌ ಸ್ವಾಮಿ ಚಿತ್ರದ ಟಿಕೆಟ್‌ ದರ ರು.99 : ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿ ತೆರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅನೀಶ್‌ ತೇಜೇಶ್ವರ್‌ ಹಾಗೂ ಮಿಲನಾ ನಾಗರಾಜ್ ಜೋಡಿಯಾಗಿ ನಟಿಸಿರುವ ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಟಿಕೆಟ್ ದರ ರು.99. ಇದು ಚಿತ್ರತಂಡವೇ ಪ್ರೇಕ್ಷಕರಿಗೆ ಕೊಟ್ಟಿರುವ ಆಫರ್‌. ನವೆಂಬರ್ 22ಕ್ಕೆ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.

ಅನೀಶ್‌ ತೇಜೇಶ್ವರ್‌ ನಾಯಕನಾಗಿ ನಟಿಸಿರುವ, ಅಭಿಷೇಕ್‌ ಶೆಟ್ಟಿ ನಿರ್ದೇಶಿಸಿರುವ ‘ಆರಾಮ್‌ ಅರವಿಂದ್‌ ಸ್ವಾಮಿ’ ಚಿತ್ರ ನ.22ರಂದು ಬಿಡುಗಡೆ ಆಗುತ್ತಿದ್ದು, ಈ ಚಿತ್ರಕ್ಕೆ ರು.99 ಟಿಕೆಟ್‌ ದರ ಇಡಲಾಗಿದೆ. ಸಿನಿಮಾ ಬಿಡುಗಡೆ ಆದ ಮೊದಲ ಮೂರು ದಿನಗಳು ಮಾತ್ರ ಈ 99 ರು. ಆಫರ್‌ ಚಾಲ್ತಿಯಲ್ಲಿರುತ್ತದೆ.

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಿರ್ದೇಶಕ ತರುಣ್‌ ಸುಧೀರ್‌, ಯುವರಾಜ್‌ ಕುಮಾರ್‌ ಅವರು 99 ರುಪಾಯಿ ಕೊಟ್ಟು ಟಿಕೆಟ್‌ ಖರೀದಿ ಮಾಡುವ ಮೂಲಕ ‘ಆರಾಮ್‌ ಅರವಿಂದ್‌ ಸ್ವಾಮಿ’ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಕತೆಯನ್ನು ಒಳಗೊಂಡ ಈ ಚಿತ್ರದಲ್ಲಿ ಮಿಲನ ನಾಗರಾಜ್ ಹಾಗೂ ಹೃತಿಕಾ ಶ್ರೀನಿವಾಸ್‌ ನಾಯಕಿಯರಾಗಿ ನಟಿಸಿದ್ದಾರೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಚಿತ್ರ ನಿರ್ಮಿಸಿರುವ ಈ ಚಿತ್ರದ ಹಾಡುಗಳು ಮೆಚ್ಚುಗೆಗೆ ಪಾತ್ರವಾಗಿವೆ.