ನಿರ್ದೇಶಕ ಅರಸು ಅಂತಾರೆ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಇದರಲ್ಲಿ ಗಣೇಶ್‌, ಅಮೃತಾ ಅಯ್ಯರ್ ನಾಯಕ, ನಾಯಕಿ.

 ಸಿನಿವಾರ್ತೆ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಮತ್ತೊಂದು ಹೊಸ ಸಿನಿಮಾ ಘೋಷಣೆಯಾಗಿದೆ. ಈ ಸಿನಿಮಾವನ್ನು ಅರಸು ಅಂತಾರೆ ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಹನುಮಾನ್ ಖ್ಯಾತಿಯ ನಟಿ ಅಮೃತಾ ಅಯ್ಯರ್‌ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಈ ಕುರಿತು ನಿರ್ದೇಶಕ ಅರಸು ಅಂತಾರೆ, ‘ಭರ್ತಿ ಹತ್ತು ವರ್ಷಗಳ ನಂತರ ಗಣೇಶ್ ಜೊತೆಗೆ ಫ್ಯಾಮಿಲಿ ಡ್ರಾಮಾ ಕಥಾಹಂದರದ ಪಕ್ಕಾ ಕಮರ್ಷಿಯಲ್‌ ಸಿನಿಮಾ ಮಾಡುತ್ತಿದ್ದೇನೆ. ಏ.6ಕ್ಕೆ ಸಿನಿಮಾದ ಮುಹೂರ್ತ ನಡೆಯಲಿದೆ. ಏ.7ರಿಂದ ಬೆಂಗಳೂರಿನಲ್ಲೇ ಮೊದಲ ಹಂತದ ಶೂಟಿಂಗ್‌ 20 ದಿನಗಳ ಕಾಲ ನಡೆಯಲಿದೆ’ ಎಂದು ಹೇಳಿದ್ದಾರೆ.

‘ಹನುಮಾನ್‌ ಸಿನಿಮಾದ ನಾಯಕಿ ಅಮೃತಾ ಅಯ್ಯರ್‌ ನಮ್ಮ ಕರ್ನಾಟಕದ ಹುಡುಗಿ. ಅವರ ಭಾಷೆ, ನಟನೆ ಎಲ್ಲವೂ ಇಷ್ಟವಾಗಿ ಈ ಸಿನಿಮಾಕ್ಕೆ ಆಯ್ಕೆ ಮಾಡಿದ್ದೇನೆ. ನಮ್ಮ ಈ ಸಿನಿಮಾ 200 ಪರ್ಸೆಂಟ್‌ ಈ ವರ್ಷವೇ ರಿಲೀಸ್‌ ಆಗುತ್ತದೆ’ ಎಂದು ಅರಸು ಹೇಳಿದ್ದಾರೆ.

ಈ ಹಿಂದೆ ವಿತರಕರಾಗಿ ಗುರುತಿಸಿಕೊಂಡಿದ್ದ ರವಿ ಈ ಸಿನಿಮಾದ ನಿರ್ಮಾಪಕರು.