ಸಾರಾಂಶ
‘ಕಾಂತಾರ ಚಾಪ್ಟರ್ 1’ ಸಿನಿಮಾದ ‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಕಾಣಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿನಿಮಾದ ಸಿನಿಮಾಟೋಗ್ರಫರ್ ಅರವಿಂದ ಕಶ್ಯಪ್ ಈ ಬಗ್ಗೆ ವಿವರ ನೀಡಿದ್ದಾರೆ.
ಸಿನಿವಾರ್ತೆ : ‘ಕಾಂತಾರ ಚಾಪ್ಟರ್ 1’ ಸಿನಿಮಾದ ‘ಬ್ರಹ್ಮಕಲಶ’ ಹಾಡಿನಲ್ಲಿ ವಾಟರ್ ಕ್ಯಾನ್ ಕಾಣಿಸಿಕೊಂಡು ಸೋಷಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಸಿನಿಮಾದ ಸಿನಿಮಾಟೋಗ್ರಫರ್ ಅರವಿಂದ ಕಶ್ಯಪ್ ಈ ಬಗ್ಗೆ ವಿವರ ನೀಡಿದ್ದಾರೆ.
ಪ್ರತಿ ಶಾಟ್ ಅನ್ನೂ ಫ್ರೇಮ್ ಟು ಫ್ರೇಮ್ ಚೆಕ್ ಮಾಡುತ್ತಿದ್ದೆವು
‘ನಾವು ಪ್ರತಿ ಶಾಟ್ ಅನ್ನೂ ಫ್ರೇಮ್ ಟು ಫ್ರೇಮ್ ಚೆಕ್ ಮಾಡುತ್ತಿದ್ದೆವು. ಬ್ರಹ್ಮಕಲಶ ಹಾಡಿನ ಔಟ್‌ಫುಟ್ ತೆಗೆಯುವಾಗ ಎಲ್ಲಾ ಫ್ರೇಮ್ ಚೆಕ್ ಮಾಡಲಾಗಿದೆ. ಜೊತೆಗೆ ಮೊದಲ ಫ್ರೇಮ್‌ನಲ್ಲಿ ವಾಟರ್ ಕ್ಯಾನ್ ಇರಲಿಲ್ಲ. ಕೊನೆಯ ಫ್ರೇಮ್‌ನಲ್ಲಿದೆ. ಅದು ಓಕೆ ಶಾಟ್ ಕೂಡ ಆಗಿರಲಿಲ್ಲ. ಹೇಗೆ ಮಿಸ್ ಆಯಿತೋ ಗೊತ್ತಿಲ್ಲ. ನಮಗೂ ಅದು ತಡವಾಗಿ ತಿಳಿಯಿತು. ಕೂಡಲೇ ತೆಗೆಸಿಬಿಟ್ಟೆವು’ ಎಂದಿದ್ದಾರೆ.
ಆ ಫ್ರೇಮ್ ಅಷ್ಟು ಸುಲಭವಾಗಿ ಯಾರ ಕಣ್ಣಿಗೂ ಕಾಣುತ್ತಿರಲಿಲ್ಲ
‘ಆ ಫ್ರೇಮ್ ಅಷ್ಟು ಸುಲಭವಾಗಿ ಯಾರ ಕಣ್ಣಿಗೂ ಕಾಣುತ್ತಿರಲಿಲ್ಲ. ಆದರೆ ಯೂಟ್ಯೂಬ್‌ನಲ್ಲಿ ಹಾಡು ಬಂದಾಗ ಯಾರೋ ಜೂನಿಯರ್ ಆರ್ಟಿಸ್ಟ್ ಒಬ್ಬ, ತಾನು ಹಾಡಿನಲ್ಲಿ ಎಷ್ಟು ಸಲ ಕಾಣಿಸುತ್ತೇನೆ ಎಂದು ಹುಡುಕುವ ಪ್ರಯತ್ನ ಮಾಡಿದ್ದಾನೆ. ಹಾಡಿನಲ್ಲಿ ನಾನು 9 ಕಡೆ ಇದ್ದೀನಿ ಅಂತ ಒಂದು ವೀಡಿಯೋ ಮಾಡಿ ಹಾಕಿದ್ದ. ಅದಕ್ಕಾಗಿ ಜೂಮ್ ಮಾಡಿ ನೋಡುವಾಗ ವಾಟರ್ ಕ್ಯಾನ್ ಆತನ ಗಮನಕ್ಕೆ ಬಂದಿದೆ. ಅದನ್ನು ಬೇರೆಯವರಿಗೆ ಹೇಳಿದ್ದಾನೆ. ಆ ರೀತಿ ಹೇಳಿದ ಮೇಲೆ ಸಹಜವಾಗಿ ಹಾಡು ನೋಡುವಾಗ ಎಲ್ಲರ ಕಣ್ಣು ಅತ್ತ ಹೋಗುತ್ತದೆ. ಹಾಗಾಗಿ ವೈರಲ್ ಆಗಿರಬಹುದು’ ಎಂದು ವಿವರಿಸಿದ್ದಾರೆ.
;Resize=(690,390))
)
)


;Resize=(128,128))
;Resize=(128,128))
;Resize=(128,128))
;Resize=(128,128))