ಕನ್ನಡದ ನಟ, ನಿರ್ಮಾಪಕ ಅಶು ಬೆದ್ರ ಅವರು ಹೊಸ ಚಿತ್ರ ಶುರು : ಮೇಕಿಂಗ್ ವಿಡಿಯೋ ಬಿಡುಗಡೆ

| Published : Aug 01 2024, 12:29 AM IST / Updated: Aug 01 2024, 11:21 AM IST

ಸಾರಾಂಶ

ನಟ, ನಿರ್ಮಾಪಕ ಅಶು ಬೆದ್ರ ಅವರು ಹೊಸ ಚಿತ್ರ ಶುರು ಮಾಡಿದ್ದಾರೆ. ಅದರ ಮೇಕಿಂಗ್ ವಿಡಿಯೋ ಇತ್ತೀಚೆಗೆ ಬಿಡುಗಡೆ ಆಗಿದೆ.

 ಸಿನಿವಾರ್ತೆ : ‘ಅಳಿದು ಉಳಿದವರು’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಂದ ಅಶು ಬೆದ್ರ ಈಗ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿದ್ದಾರೆ. 

ಪ್ರವೀಣ್‌ ಕಾಡಶೆಟ್ಟಿ ಈ ಚಿತ್ರದ ನಿರ್ದೇಶಕರು. ಚಿತ್ರದ ಹೆಸರು ಹಾಗೂ ಉಳಿದ ತಾರಾಗಣ ಮತ್ತು ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಚಿತ್ರತಂಡ ಬಹಿರಂಗಗೊಳಿಸಲಿದೆ. ಈಗ ಬಿಡುಗಡೆ ಆಗಿರುವ ಮೇಕಿಂಗ್‌ ವಿಡಿಯೋ ಚಿತ್ರದ ಮೇಲಿನ ನಿರೀಕ್ಷೆಗ‍ಳಿಗೆ ಕಾರಣವಾಗಿದೆ.