ಅಥರ್ವ ಚಿತ್ರದ ಟ್ರೇಲರ್‌ ಬಿಡುಗಡೆ

| Published : Oct 12 2023, 12:01 AM IST

ಸಾರಾಂಶ

ವೈಜಾಕ್ ರಾಜು ಪುತ್ರ ಕಾರ್ತಿಕ್ ರಾಜು ನಟನೆಯ ಅಥರ್ವ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.
ಕನ್ನಡಪ್ರಭ ಸಿನಿವಾರ್ತೆ ‘ಮನೆ ದೇವ್ರು’, ‘ಹಾಲುಂಡ ತವರು’, ‘ಕರುಳಿನ ಕೂಗು’ ಸಿನಿಮಾಗಳನ್ನು ನಿರ್ಮಿಸಿದ್ದ ಆಂಧ್ರ ಮೂಲದ ನಿರ್ಮಾಪಕ ವೈಜಾಕ್‌ ರಾಜು ಪುತ್ರ ಕಾರ್ತಿಕ್‌ ರಾಜು ‘ಅಥರ್ವ’ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಮಹೇಶ್‌ ರೆಡ್ಡಿ ನಿರ್ದೇಶನ, ಸುಭಾಷ್‌ ನೂತಲಪಾಟಿ ನಿರ್ಮಾಣದ ಚಿತ್ರವಿದು. ನಿರ್ಮಾಪಕ ಮಾರ್ಸ್‌ ಸುರೇಶ್‌ ಈ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಪತ್ರಕರ್ತೆ ಪಾತ್ರದಲ್ಲಿ ಸಿಮ್ರಾನ್‌ ನಟಿಸಿದ್ದಾರೆ. ‘ನಾನು ಪುನೀತ್‌ ರಾಜ್‌ಕುಮಾರ್‌ ಅವರ ವೀರ ಕನ್ನಡಿಗ ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದೇನೆ. ಈಗ ನಾಯಕ ನಟನಾಗಿ ನಿಮ್ಮ ಮುಂದೆ ಬಂದಿದ್ದೇನೆ’ ಎಂದು ಕಾರ್ತಿಕ್‌ ರಾಜು ಹೇಳಿಕೊಂಡರು.