‘ಅಯೋಗ್ಯ 2’ ಚಿತ್ರಕ್ಕೆ ಮುಹೂರ್ತ : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೊದಲ ದೃಶ್ಯಕ್ಕೆ ಕ್ಲಾಪ್‌

| Published : Dec 12 2024, 12:31 AM IST / Updated: Dec 12 2024, 05:02 AM IST

‘ಅಯೋಗ್ಯ 2’ ಚಿತ್ರಕ್ಕೆ ಮುಹೂರ್ತ : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮೊದಲ ದೃಶ್ಯಕ್ಕೆ ಕ್ಲಾಪ್‌
Share this Article
  • FB
  • TW
  • Linkdin
  • Email

ಸಾರಾಂಶ

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಚಿತ್ರಕ್ಕೆ ಮುಹೂರ್ತ ಆಗಿದೆ. ಜತೆಗೆ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಿದೆ.

 ಸಿನಿವಾರ್ತೆ

ಸತೀಶ್‌ ನೀನಾಸಂ, ರಚಿತಾ ರಾಮ್‌ ಜೋಡಿಯ ‘ಅಯೋಗ್ಯ 2’ ಚಿತ್ರಕ್ಕೆ ಮುಹೂರ್ತ ಆಗಿದೆ. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಆಗಿದೆ.

ಈ ಸಂದರ್ಭದಲ್ಲಿ ಸತೀಶ್‌ ನೀನಾಸಂ, ‘ಈ ಚಿತ್ರ ನಿರ್ಮಿಸಲು ನಿರ್ಮಾಪಕರ ದೊಡ್ಡ ಪಟ್ಟಿಯೇ ಇತ್ತು. ಕೊನೆಗೆ ಮುನೇಗೌಡ ಅವರು ನಿರ್ಮಾಪಕರಾಗಿದ್ದಾರೆ. ಇದು ಪ್ರೇಕ್ಷಕರ ಸಿನಿಮಾ. ಅವರು ಗೆಲ್ಲಿಸಿದಕ್ಕೆ ಮುಂದುವರಿದ ಭಾಗ ಸೆಟ್ಟೇರುತ್ತಿದೆ’ ಎಂದರು.

ನಿರ್ದೇಶಕ ಮಹೇಶ್‌ ಕುಮಾರ್‌, ‘ಮೊದಲ ಭಾಗದ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್‌ ಮಾಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಹೀಗಾಗಿ ಈ ಬಾರಿ ಕನ್ನಡದ ಜತೆಗೆ ತೆಲುಗು, ತಮಿಳಿನಲ್ಲೂ ಚಿತ್ರೀಕರಣ ಮಾಡುತ್ತಿದ್ದೇವೆ. ಇದು ಪ್ಯಾನ್‌ ಇಂಡಿಯಾ ಸಿನಿಮಾ ಅಲ್ಲ. ಫ್ಯಾನ್ಸ್‌ ಇಂಡಿಯಾ ಸಿನಿಮಾ’ ಎಂದರು.

ರಚಿತಾ ರಾಮ್‌, ‘ಇಲ್ಲೂ ಕೂಡ ನಾನು ಸತೀಶ್‌ ನೀನಾಸಂ ಟಾಮ್ ಅಂಡ್ ಜೆರ್ರಿಯಂತೆ ಕಿತ್ತಾಡುತ್ತೇವೆ. ನಮ್ಮ ಪಾತ್ರಗಳ ಮೂಲಕ ಕತೆ ಸಾಗುತ್ತದೆ’ ಎಂದರು.

ಮಂಜು ಪಾವಗಡ ಚಿತ್ರಕ್ಕೆ ಜತೆಯಾಗಿದ್ದಾರೆ. ಮುನೇಗೌಡ ನಿರ್ಮಾಣದ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಇದೆ. ಮಾಸ್ತಿ ಸಂಭಾಷಣೆ, ವಿಶ್ವಜಿತ್‌ ರಾವ್‌ ಛಾಯಾಗ್ರಹಣ ಹೊಣೆ ಹೊತ್ತಿದ್ದಾರೆ.