ಸಾರಾಂಶ
ಯುವ ಪ್ರತಿಭೆಗಳ ಹೊಸ ಸಿನಿಮಾ ಬ್ಯಾಕ್ ಬೆಂಚರ್ಸ್ ಇಂದು ಬಿಡುಗಡೆ
ಕಾಲೇಜ್ ತರುಣ, ತರುಣಿಯ ಕತೆ ಹೊಂದಿರುವ ‘ಬ್ಯಾಕ್ ಬೆಂಚರ್ಸ್’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾದ ಟ್ರೇಲರ್ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಕುರಿತು ಕುತೂಹಲ ಹುಟ್ಟಿಸಿದೆ.
ಬಿ.ಆರ್. ರಾಜಶೇಖರ್ ಈ ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾ ಬಗ್ಗೆ ರಾಜಶೇಖರ್, ‘ಈ ಸಿನಿಮಾ ನನಗೆ ಮರು ಯೌವನ ನೀಡಿದೆ. ಯುವಕರೇ ತುಂಬಿರುವ ಈ ಸಿನಿಮಾ ಟೀಮ್ ಜೊತೆಗೆ 3 ವರ್ಷ ಜರ್ನಿ ಮಾಡಿದ್ದೇನೆ. ನಮ್ಮ ಚಿತ್ರ ಈ ಹುಡುಗರಿಗಾಗಿ ಗೆಲ್ಲಬೇಕು. ಅವರು ತಮ್ಮ ಜೀವನದ ಅಮೂಲ್ಯ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ’ ಎಂದಿದ್ದಾರೆ.ಹಿರಿಯ ನಟ ಸುಚೇಂದ್ರ ಪ್ರಸಾದ್ ನಿರ್ದೇಶಕರ ಶಾಲಾ ದಿನಗಳ ಸ್ನೇಹಿತ. ‘ಆ ಸ್ನೇಹಕ್ಕಾಗಿ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ’ ಎಂದು ಅವರು ಹೇಳಿದರು.
ಈ ಸಿನಿಮಾದಲ್ಲಿ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್ ಮುಂತಾದವರು ನಟಿಸಿದ್ದಾರೆ.