ಫ್ಯಾಶನ್‌ ಟ್ರೆಂಡ್‌ಗಳು ಹಬ್ಬದ ಸೀಸನ್‌ ಬಂದಾಗಲೆಲ್ಲ ಸಾಂಪ್ರದಾಯಿಕತೆಗೆ ಮುಖಮಾಡುತ್ತವೆ. ಸದ್ಯಕ್ಕೀಗ ಬಂದಿರೋ ಬಿಜ್ಯುವೆಲ್ಡ್ ಬ್ಲೌಸ್‌ ಟ್ರೆಂಡ್‌ ಪಾರಂಪರಿಕತೆಗೆ ಹೊಸತನದ ಕಸಿ ಮಾಡಿದ ಹಾಗಿದೆ. ಕತ್ತಿಗೆ ಹಾಕುವ ಆಭರಣಗಳನ್ನು ಅನಾಮತ್ತಾಗಿ ಎತ್ತಿ ಬ್ಲೌಸಿಗೆ ಫಿಕ್ಸ್‌ ಮಾಡಿಬಿಟ್ಟಿದ್ದಾರೆ.

ಸಿನಿವಾರ್ತೆ 

ಫ್ಯಾಶನ್‌ ಟ್ರೆಂಡ್‌ಗಳು ಹಬ್ಬದ ಸೀಸನ್‌ ಬಂದಾಗಲೆಲ್ಲ ಸಾಂಪ್ರದಾಯಿಕತೆಗೆ ಮುಖಮಾಡುತ್ತವೆ. ಸದ್ಯಕ್ಕೀಗ ಬಂದಿರೋ ಬಿಜ್ಯುವೆಲ್ಡ್ ಬ್ಲೌಸ್‌ ಟ್ರೆಂಡ್‌ ಪಾರಂಪರಿಕತೆಗೆ ಹೊಸತನದ ಕಸಿ ಮಾಡಿದ ಹಾಗಿದೆ. ಕತ್ತಿಗೆ ಹಾಕುವ ಆಭರಣಗಳನ್ನು ಅನಾಮತ್ತಾಗಿ ಎತ್ತಿ ಬ್ಲೌಸಿಗೆ ಫಿಕ್ಸ್‌ ಮಾಡಿಬಿಟ್ಟಿದ್ದಾರೆ. ಹಾಗಿದ್ದರೆ ಬೇರೆ ಆಭರಣದ ಅವಶ್ಯಕತೆ ಇಲ್ವಾ ಅಂದರೆ ಖಂಡಿತಾ ಇದೆ, ಇದು ಹಬ್ಬದ ಸೀಸನ್‌ನಲ್ಲಿ ಆಭರಣಗಳನ್ನು ಎತ್ತಿ ಮೆರೆಸೋ ಟ್ರೆಂಡ್‌ ಆಗಿರುವ ಕಾರಣ ಇದರಲ್ಲಿ ರೂಪದರ್ಶಿಗಳು ಕುತ್ತಿಗೆಗೆ ಚೋಕರ್‌ ಧರಿಸಿ ರವಿಕೆಯ ಇಂಚಿಂಚನ್ನೂ ಜ್ಯುವೆಲ್ಲರಿಗಳಿಂದ ತುಂಬಿಸಿಬಿಟ್ಟಿದ್ದಾರೆ.

ಭೂಮಿ ಪೆಡ್ನಾಕರ್‌ ಅನ್ನೋ ಬಾಲಿವುಡ್‌ನ ಪ್ರತಿಭಾವಂತ ನಟಿ ಅಪರೂಪಕ್ಕೆ ಟ್ರೆಂಡಿ ಉಡುಗೆಗಳ ಮೂಲಕ ಗಮನಸೆಳೆಯುತ್ತಾರೆ. ಸದ್ಯಕ್ಕೀಗ ಈ ಅಭಿನೇತ್ರಿಯ ಟ್ರೆಂಡಿ ಲುಕ್‌ ಅನ್ನು ಫ್ಯಾಶನ್‌ ಜಗತ್ತು ಕೊಂಡಾಡಿದೆ. ಇದರಲ್ಲಿ ಭೂಮಿ ತೊಟ್ಟಿರುವುದು ಪಂಕಜ್‌ ಎಸ್‌ ಡಿಸೈನ್‌ ಮಾಡಿರುವ ಹೆರಿಟೇಜ್‌ ಔಟ್‌ಫಿಟ್‌. ಕಿವಿಗೆ ಹದವಾದ ಬೆಂಡೋಲೆ, ಕತ್ತಿಗೆ ಚೋಕರ್‌ ತೊಟ್ಟು ರಿಚ್‌ ಡಿಸೈನ್‌ನ ಜ್ಯುವೆಲ್ಡ್‌ ಬ್ಲೌಸ್‌ ತೊಟ್ಟಿರುವ ಭೂಮಿ ಲುಕ್‌ ಸಖತ್‌ ಹವಾ ಸೃಷ್ಟಿಸಿದೆ.

ಟ್ರೆಂಡ್‌ಗಳನ್ನು ಅನಾಮತ್ತಾಗಿ ಆವಾಹಿಸಿಕೊಳ್ಳುವ ಶ್ರೀಮಂತ ಸೆಲೆಬ್ರಿಟಿ ಇಶಾ ಅಂಬಾನಿಯಂತೂ ಜ್ಯುವೆಲ್ಲರಿ ಮಳಿಗೆಯನ್ನೇ ಧರಿಸಿ ನಿಂತ ಹಾಗೆ ಲಕ್ಸುರಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಖ್ಯಾತ ಫ್ಯಾಶನ್‌ ಡಿಸೈನರ್‌ ಮನೀಷ್‌ ಮಲ್ಹೋತ್ರ ಅವರಿಂದ ಸಭ್ಯಸಾಚಿ ತನಕ ಹೆಚ್ಚಿನವರು ಇಂಥಾದ್ದೊಂದು ಕಲಾತ್ಮಕ ಟ್ರೆಂಡ್‌ಗೆ ಜೈ ಅಂದಿದ್ದಾರೆ. ಬಾಲಿವುಡ್‌ನಲ್ಲಿ ಅಲಿಯಾ ಭಟ್‌ರಿಂದ ಇತ್ತೀಚಿಗೆ ಎಂಟ್ರಿಕೊಟ್ಟ ಶಾರ್ವರಿ ವಾಗ್‌ ತನಕ ಹಲವರು ಈ ಸ್ಟೈಲ್‌ಗೆ ಫಿದಾ ಆಗಿದ್ದಾರೆ. ಜೊತೆಗೆ ಹಬ್ಬದ ಸೀಸನ್‌ಗೆ ಬಿಜ್ಯುವೆಲ್ಡ್‌ ಟ್ರೆಂಡ್‌ ಬಾಲಿವುಡ್‌ನಿಂದ ಬೆಳಗಾವಿ ಹುಡುಗಿಯರವರೆಗೆ ಹಲವರ ಮೈಮೇಲೆ ವಿರಾಜಮಾನವಾಗುತ್ತಿದೆ.