ಸಾರಾಂಶ
ಸಿನಿವಾರ್ತೆ
ಟ್ರೆಂಡಿ ಫ್ಯಾಶನ್, ಹೇರ್‌ಸ್ಟೈಲ್ ಟ್ರೈ ಮಾಡೋದ್ರಲ್ಲಿ ಸದಾ ಮುಂದಿರುವ ಭೂಮಿ ಶೆಟ್ಟಿ ಇದೀಗ ಹೊಸತೊಂದು ಹೇರ್‌ಸ್ಟೈಲ್ ಮಾಡಿಕೊಂಡಿದ್ದಾರೆ. ಅವರು ಟ್ರೈ ಮಾಡಿರುವ ಹೇರ್ ಸ್ಟೈಲ್ ಹೆಸರು ಬಾಕ್ಸ್ ಬ್ರೇಡ್.
ಈ ಹೇರ್ ಸ್ಟೈಲ್ ವಿದೇಶಗಳಲ್ಲಿ ಸಖತ್ ಫೇಮಸ್. ನಮ್ಮಲ್ಲಿ ರ್‍ಯಾಪರ್‌ಗಳು, ಪಾಶ್ಚಾತ್ಯ ಸಂಗೀತಗಾರರು ಈ ಸ್ಟೈಲ್ ಮಾಡುತ್ತಿರುತ್ತಾರೆ. ನಟಿಯರು ಇಂಥಾ ಸಾಹಸ ಮಾಡಿರುವುದು ಕಡಿಮೆ. ಆದರೆ ಭೂಮಿ ಶೆಟ್ಟಿ ಈ ಹೇರ್‌ಸ್ಟೈಲ್ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಣ್ಮನ ಸೆಳೆಯುತ್ತಿದ್ದಾರೆ. ಫೋಟೋ ಶೂಟ್‌ನಲ್ಲಿ ಕ್ಯಾಮರಾಗೆ ಥರಹೇವಾರಿ ಫೋಸ್‌ಗಳನ್ನ ಕೊಟ್ಟಿದ್ದಾರೆ. ಭೂಮಿ ಶೆಟ್ಟಿಯ ಹೊಸ ಅವತಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ತಮ್ಮ ಈ ನ್ಯೂ ಲುಕ್ ಬಗ್ಗೆ ಮಾತನಾಡಿರುವ ಭೂಮಿ ಶೆಟ್ಟಿ, ‘ಇದು ನನ್ನ ಅಚ್ಚುಮೆಚ್ಚಿನ ಹೇರ್‌ಸ್ಟೈಲ್. ಕಳೆದ ಕೆಲ ದಿನಗಳಿಂದ ಈ ಹೇರ್ ಸ್ಟೈಲ್ ಮಾಡಲು ಹಾತೊರೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಸಖತ್ ಟ್ರೆಂಡಿ ಅನಿಸಿಕೊಂಡಿರುವ ಈ ಹೇರ್‌ಸ್ಟೈಲ್ ಅನ್ನು ಮಾಡಲು ಒಪ್ಪಿಕೊಳ್ಳಲು ನಮ್ಮವರು ಹಿಂದೇಟು ಹಾಕುತ್ತಾರೆ. ಆದರೆ ಇತರರು ನಮ್ಮ ಸಂಸ್ಕೃತಿಯನ್ನು ಅನುಸರಿಸಬೇಕು ಅಂದುಕೊಳ್ಳುವ ನಾವು ಇತರರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದರಲ್ಲಿ ತಪ್ಪೇನಿದೆ’ ಎಂದಿದ್ದಾರೆ.
ಸದ್ಯಕ್ಕೆ ಭೂಮಿ ಅವರಿಗೆ ಈ ಹೇರ್ ಸ್ಟೈಲ್ ಬದಲಿಸುವ ಆಲೋಚನೆ ಇಲ್ಲ. ಒಂದಿಷ್ಟು ದಿನ ಇದೇ ಗೆಟಪ್ಪಿನಲ್ಲಿಯೇ ಇರುವುದಾಗಿ ನಟಿ ಹೇಳಿದ್ದಾರೆ. ಈ ಹೇರ್ ಸ್ಟೈಲ್ ನಲ್ಲಿ ಹೊಸ ಫೋಟೋಶೂಟ್ ಮಾಡಿಸಲು ಅಣಿಯಾಗುತ್ತಿದ್ದಾರೆ. ಸದ್ಯದಲ್ಲೇ ಇವರು ಅಮೆರಿಕಾಕ್ಕೆ ಪ್ರಯಾಣಿಸಲಿದ್ದಾರೆ. ಉಳಿದಂತೆ ಈಕೆ ತೆಲುಗು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.