ಸಾರಾಂಶ
ನನ್ನದು ಪಾಸಿಟಿವ್ ಅಪ್ರೋಚ್ ನೆಗೆಟಿವ್ ಪಾತ್ರಗಳತ್ತ ಕಣ್ಣೆತ್ತಿಯೂ ನೋಡಲ್ಲ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ.
ಸಿನಿವಾರ್ತೆ : ‘ಕನ್ನಡ ಸಿನಿಮಾಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ನೆಗೆಟಿವ್ ಪಾತ್ರಕ್ಕೆ ಕರೆಯುತ್ತಿದ್ದಾರೆ. ನನ್ನದು ಯಾವತ್ತೂ ಪಾಸಿಟಿವ್ ಅಪ್ರೋಚ್. ಪಾತ್ರ ನೆಗೆಟಿವ್ ಶೇಡ್‌ನದು ಅಂದಾಕ್ಷಣ ಕತೆಯನ್ನೂ ಕೇಳದೇ ನಿರಾಕರಿಸುತ್ತೇನೆ.’
-ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಾತುಗಳಿವು.
ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್‌ಗಾಗಿ ಮಂಗಳೂರಿಗೆ ಬಂದಿರುವ ಸುನೀಲ್ ಶೆಟ್ಟಿ , ‘ತುಳು ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ಇಂಥಾ ಹೊತ್ತಲ್ಲೇ ರೂಪೇಶ್ ಒಳ್ಳೆಯ ಕಥೆ ಹೇಳಿದರು. ಇದು ತುಳು ನೆಲದ ಕಥೆ. ಅದನ್ನು ಕೇಳಿದಾಗ ಈ ಸಿನಿಮಾ ಮಾಡಬೇಕು ಅಂತನಿಸಿತು. ಇದಲ್ಲದೇ ತುಳುನಾಡು ನನ್ನ ತಾಯ್ನೆಲ. ಬಪ್ಪನಾಡು, ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆಲ್ಲ ಬರುತ್ತಿರುತ್ತೇನೆ’ ಎಂದು ಹೇಳಿದ್ದಾರೆ.