ಬಾಲಿವುಡ್ ಸೆಲೆಬ್ರಿಟಿಗಳ ಬಣ್ಣದ ಬ್ಯಾಗಿನ ಟ್ರೆಂಡ್

| N/A | Published : Oct 10 2025, 12:47 PM IST

Anushka Sharma fancy hand bags Latest designs

ಸಾರಾಂಶ

ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ಉಡುಗೆಗಳ ಜೊತೆಗೆ ಹ್ಯಾಂಡ್‌ಬ್ಯಾಗ್‌ಗಳು ಸಖತ್‌ ಸೌಂಡ್‌ ಮಾಡ್ತಿವೆ. ಮೊದಲೆಲ್ಲ ಹೆಚ್ಚಿನ ತಾರೆಯರು ಕೈಯಲ್ಲಿ ಕಡುಗಪ್ಪು ಅಥವಾ ಬಿಳಿ ಬಣ್ಣದ ದುಬಾರಿ ಬ್ಯಾಗ್‌ ಹಿಡಿದು ಓಡಾಡುತ್ತಿದ್ದರು. ಆದರೆ ಈ ಗಾಢ ಬಣ್ಣಗಳ ಬೋಲ್ಡ್‌ ಲುಕ್‌ನ ಬ್ಯಾಗ್‌ ಟ್ರೆಂಡಿ ಆಗಿದೆ.

ಇತ್ತೀಚೆಗೆ ಬಾಲಿವುಡ್‌ನ ಕ್ರೇಜಿ ನಿರ್ದೇಶಕ ಕರಣ್‌ ಜೋಹರ್‌ ಕಡು ಕೇಸರಿ ಬಣ್ಣದ ಬಾಯಿ ತೆರೆದ ಶಾರ್ಕ್‌ ಮೀನಿನ ವಿನ್ಯಾಸದ ಬ್ಯಾಗ್‌ ಸಖತ್‌ ಟ್ರೆಂಡಿಂಗ್‌ ಆಯ್ತು. ಅದರ ಬಣ್ಣ, ಡಿಸೈನ್‌ ಜೆನ್‌ ಜೀ ಹುಡುಗ, ಹುಡುಗಿಯರಿಗೆ ಫನ್ನಿ ಅಂತನಿಸಿ ಅವರು ಇಂಥಾ ಬ್ಯಾಗ್‌ಗಳನ್ನು ಹಿಡಿದು ಅಡ್ಡಾಡಲು ಶುರು ಮಾಡಿದರು.

ಕರೀನಾ ಕಪೂರ್‌ಗಂತೂ ಕೇಸರಿ ಬಣ್ಣದ ಬ್ಯಾಗ್‌ ಬೆಸ್ಟ್‌ ಫ್ರೆಂಡ್‌ ಆಗಿ ಬಿಟ್ಟಿದೆ. ಡ್ರೆಸ್‌ ಬಣ್ಣ ಹೇಗೇ ಇರಲಿ, ಅವರು ಇದೇ ಹ್ಯಾಂಡ್‌ಬ್ಯಾಗ್‌ ಜೊತೆ ಕಾಣಿಸಿಕೊಳ್ತಾರೆ.

ಪ್ರಿಯಾಂಕಾ ಚೋಪ್ರಾಗೆ ಮೊದಲಿಂದಲೂ ಕೆಂಪು ಬ್ಯಾಗ್‌ನ ವ್ಯಾಮೋಹ. ಇಶಾ ಗುಪ್ತಗೆ ಬ್ಯಾಗ್‌ ತುಂಬ ಬಣ್ಣಗಳಿದ್ದರೆ ಚೆಂದ.

ಸದ್ಯಕ್ಕೀಗ ಬಾಲಿವುಡ್‌ ಸೆಲೆಬ್ರಿಟಿಗಳ ಕೈಬ್ಯಾಗ್‌ನ ಬೋಲ್ಡ್‌ ಕಲರೇ ಅವರ ಡ್ರೆಸ್‌ ಅನ್ನೂ ಮೀರಿ ಟ್ರೆಂಡ್‌ ಆಗ್ತಿದೆ.

Read more Articles on