ನನ್ನ ಮೊದಲ ಕ್ರಶ್ ಯಾರು ಗೊತ್ತಾ: ಮೊದಲ ಪ್ರೀತಿ ನೆನಪಿಸಿಕೊಂಡ ಚೈತ್ರಾ ಆಚಾರ್‌- ವ್ಯಾಲೆಂಟೈನ್ಸ್ ಡೇ ವಿಶೇಷ

| Published : Feb 14 2024, 02:18 AM IST

ನನ್ನ ಮೊದಲ ಕ್ರಶ್ ಯಾರು ಗೊತ್ತಾ: ಮೊದಲ ಪ್ರೀತಿ ನೆನಪಿಸಿಕೊಂಡ ಚೈತ್ರಾ ಆಚಾರ್‌- ವ್ಯಾಲೆಂಟೈನ್ಸ್ ಡೇ ವಿಶೇಷ
Share this Article
  • FB
  • TW
  • Linkdin
  • Email

ಸಾರಾಂಶ

ಚೈತ್ರಾ ಆಚಾರ್ ಅವರ ಫರ್ಸ್ಟ್ ಕ್ರಶ್ ಯಾರು ಗೊತ್ತಾ?

- ಚೈತ್ರಾ ಆಚಾರ್‌

ನನ್ನ ಅಪ್ಪ ಟೀಚರ್‌. ಬಹಳ ಶಿಸ್ತಿನ ವ್ಯಕ್ತಿ. ಹೀಗಾಗಿ ಕಾಲೇಜ್ ಲೆವೆಲ್‌ಗೆ ಬಂದರೂ ಲೈನ್‌ ಹೊಡೆಯೋದಕ್ಕಾಗಲೀ, ಲವ್‌ ಮಾಡೋದಕ್ಕಾಗಲೀ ಅವಕಾಶವೇ ಇರಲಿಲ್ಲ. ಆಥರ ಸಣ್ಣ ಥಾಟ್ ಬಂದರೂ ಅಪ್ಪನ ನೆನಪಾಗಿ ಏನನ್ನೂ ಮನಸ್ಸಿನ ಒಳಗೆ ಬಿಟ್ಟುಕೊಡುತ್ತಿರಲಿಲ್ಲ. ನಾನು ಇಂಜಿನಿಯರಿಂಗ್ ಮಾಡುವವರೆಗೂ ಇದೇ ಸ್ಥಿತಿ ಇತ್ತು. ಇಂಜಿನಿಯರಿಂಗ್‌ ವೇಳೆ ಅಪ್ಪನ ಭಯ ಕಡಿಮೆ ಆಗಿತ್ತು.

ಆ ಹೊತ್ತಿಗೆ ನನ್ನ ಕಣ್ಣಿಗೆ ಬಿದ್ದವನು ನನ್ನ ಸೀನಿಯರ್‌. ಬಹಳ ಹ್ಯಾಂಡ್‌ಸಮ್‌ ಹುಡುಗ. ನೋಡೋದಕ್ಕೆ ಸಖತ್ತಾಗಿದ್ದ. ನನಗೆ ಅವನ ಮೇಲೆ ಒಂಥರಾ ಕ್ರಶ್. ಆದರೆ ಇದು ಬಹಳ ದಿನ ಮುಂದುವರಿಯಲಿಲ್ಲ. ನನಗೆ ಏನನ್ನೂ ಮನಸ್ಸಲ್ಲೇ ಇಟ್ಟುಕೊಳ್ಳೋದಕ್ಕೆ ಬರೋದಿಲ್ಲ. ಒಂದು ದಿನ ಅವನ ಬಳಿ ನಂಗೆ ಅವನ ಬಗ್ಗೆ ಕ್ರಶ್ ಆಗಿರೋದನ್ನು ಹೇಳಿಕೊಂಡೆ. ಅವನು ಅದನ್ನೆಲ್ಲ ಸೀರಿಯಸ್ಸಾಗಿ ತಗೊಳ್ಳಲಿಲ್ಲ. ‘ಹೋಗಮ್ಮಾ, ಅದೆಲ್ಲಾ ಏನು?’ ಅನ್ನೋ ಧಾಟಿಯಲ್ಲಿ ಮಾತಾಡಿಬಿಟ್ಟ. ನಂಗೆ ಏನೇನೋ ಆಯ್ತು. ಆಮೇಲೆ ಹಿಂದಿದ್ದ ಕ್ರಶ್ ಗಿಶ್ ಎಲ್ಲ ಹೋಗಿ ನಾವಿಬ್ಬರೂ ಒಳ್ಳೆ ಸ್ನೇಹಿತರಾದೆವು. ಈಗಲೂ ನಾವು ಒಳ್ಳೆಯ ಫ್ರೆಂಡ್ಸ್‌. ಆಮೇಲಿಂದ ಯಾರ ಜೊತೆಗೂ ಲವ್ವಲ್ಲಿ ಬಿದ್ದಿಲ್ಲ. ಅದಕ್ಕೆ ಸಮಯವೂ ನಂಗಿಲ್ಲ. ಆದರೆ ತಮಿಳು ನಟ ಸೂರ್ಯ ನನ್ನ ಯಾವತ್ತಿನ ಕ್ರಶ್. ಅವರ ಆ್ಯಕ್ಟಿಂಗ್, ಲುಕ್ ಎಲ್ಲವೂ ನಂಗಿಷ್ಟ.