ಕನ್ನಡ ಚಲನಚಿತ್ರ ‘ಕಾಂತಾರ ಚಾಪ್ಟರ್ 1’ರಲ್ಲಿ ನಟ ರಿಷಬ್ ಶೆಟ್ಟಿ ಅವರ ನಟನೆಯನ್ನು ಅಪಹಾಸ್ಯ ಮಾಡಿ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಬೆಂಗಳೂರು : ಕನ್ನಡ ಚಲನಚಿತ್ರ ‘ಕಾಂತಾರ ಚಾಪ್ಟರ್ 1’ರಲ್ಲಿ ನಟ ರಿಷಬ್ ಶೆಟ್ಟಿ ಅವರ ನಟನೆಯನ್ನು ಅಪಹಾಸ್ಯ ಮಾಡಿ ವಿವಾದಕ್ಕೀಡಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ಗೋವಾ ಚಲನಚಿತ್ರೋತ್ಸವದ ವೇಳೆ ಎಡವಟ್ಟು
ಗೋವಾ ಚಲನಚಿತ್ರೋತ್ಸವದ ವೇಳೆ ‘ಕಾಂತಾರ 1’ ಸಿನಿಮಾದಲ್ಲಿ ನಟ ರಿಷಬ್ ಅವರ ದೈವದ ನಟನೆಯನ್ನು ರಣವೀರ್ ಅಣಕವಾಡಿದ್ದಾರೆ. ಇದರಿಂದ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ವಕೀಲ ಪ್ರಶಾಂತ್ ಮೇತಲ್ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿರುವ ಪೊಲೀಸರು, ಘಟನೆ ನಡೆದ ಸ್ಥಳವಾಗಿರುವ ಗೋವಾಕ್ಕೆ ರವಾನಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಚಿತ್ರೋತ್ಸವದಲ್ಲಿ ನಟ ರಿಷಬ್ ಶೆಟ್ಟಿ ಅವರ ಮುಂದೆ ವೇದಿಕೆಯಲ್ಲಿ ತಮಾಷೆ
ಚಿತ್ರೋತ್ಸವದಲ್ಲಿ ನಟ ರಿಷಬ್ ಶೆಟ್ಟಿ ಅವರ ಮುಂದೆ ವೇದಿಕೆಯಲ್ಲಿ ಕಾಂತಾರ-1 ಸಿನಿಮಾದ ಕುರಿತು ರಣವೀರ್ ತಮಾಷೆ ಮಾಡಿದ್ದರು. ಅಲ್ಲದೆ ದೈವವನ್ನು ದೆವ್ವ ಎಂದು ಕರೆದು ಅವರು ವಿವಾದಕ್ಕೀಡಾಗಿದ್ದರು. ತಮ್ಮ ವರ್ತನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರಣವೀರ್ ಕ್ಷಮೆ ಕೋರಿದ್ಗರು. ಈಗ ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದೆ.


