ಸಾರಾಂಶ
ಡಾಲಿ ಧನಂಜಯ ನಿರ್ಮಾಣದ ಜೆಸಿ ದಿ ಯೂನಿವರ್ಸಿಟಿ ಚಿತ್ರಕ್ಕೆ ಮುಹೂರ್ತ. ಪ್ರಖ್ಯಾತ್ ಈ ಚಿತ್ರದ ನಾಯಕ.
ಕನ್ನಡಪ್ರಭ ಸಿನಿವಾರ್ತೆ
ಡಾಲಿ ಧನಂಜಯ ನಿರ್ಮಾಣದ ಹೊಸ ಸಿನಿಮಾ‘ಜೆಸಿ ದಿ ಯೂನಿವರ್ಸಿಟಿ’. ಈ ಹಿಂದೆ ‘ನಡುವೆ ಅಂತರವಿರಲಿ’ ಚಿತ್ರದಲ್ಲಿ ನಾಯಕನಾಗಿದ್ದ ಪ್ರಖ್ಯಾತ್ ಈ ಸಿನಿಮಾದ ಹೀರೋ. ಚೇತನ್ ಜೈರಾಮ್ ನಿರ್ದೇಶನವಿದೆ.ಇದರಲ್ಲಿ ಜೆಸಿ ಎಂದರೆ ಜುಡಿಷಿಯಲ್ ಕಸ್ಟಡಿ. ಜೈಲಿನಿಂದ ಹೊರ ಬಂದ ಯುವಕನ ಕಥೆ ಈ ಚಿತ್ರದ್ದು. ಸಿನಿಮಾ ಮುಹೂರ್ತ ಬೆಂಗಳೂರಿನ ಬಂಡೆ ಮಹಾಕಾಳಿ ದೇವಾಲಯದಲ್ಲಿ ನಡೆಯಿತು. ಡಾಲಿ ಧನಂಜಯ ತನ್ನ ನಿರ್ಮಾಣದ 5ನೇ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಾಸ್ತಿ ಸಂಭಾಷಣೆ, ಕಾರ್ತಿಕ್ ಛಾಯಾಗ್ರಹಣ, ರೋಹಿತ್ ಸೋವರ್ ಸಂಗೀತ ಚಿತ್ರಕ್ಕಿದೆ.