ಸಾರಾಂಶ
ರಿಷಿ ನಟನೆಯ ರುದ್ರಗರುಡ ಪುರಾಣ ಟ್ರೇಲರ್ ಅನ್ನು ಧನಂಜಯ ಬಿಡುಗಡೆ ಮಾಡಿದ್ದಾರೆ.
ಸಿನಿವಾರ್ತೆ
ರಿಷಿ ನಾಯಕನಾಗಿರುವ ‘ರುದ್ರ ಗರುಡ ಪುರಾಣ’ ಚಿತ್ರದ ಟ್ರೇಲರ್ ಅನ್ನು ಡಾಲಿ ಧನಂಜಯ ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಧನಂಜಯ, ‘ರಿಷಿ ನನ್ನ ಕಾಲೇಜು ಹಾಗೂ ರಂಗಭೂಮಿ ದಿನಗಳ ಗೆಳೆಯ. ಈ ಚಿತ್ರದ ನಿರ್ದೇಶಕರು ಬಹು ದಿನಗಳಿಂದ ಆತ್ಮೀಯರು. ಅವರ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ’ ಎಂದರು.
ನಾಯಕ ರಿಷಿ, ‘ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಮೂಲಕ ಚಿತ್ರ ಜನರ ಮನ ತಲುಪಿದೆ. ನಿರ್ದೇಶಕರ ಶ್ರಮ ಚಿತ್ರಕ್ಕೆ ಸಾಕಷ್ಟಿದೆ’ ಎಂದರು.
ನಾಯಕಿ ಪ್ರಿಯಾಂಕಾ ಕುಮಾರ್, ‘ನನ್ನ ತಂದೆಗೆ ನಾನು ಚೆನ್ನಾಗಿ ಓದಬೇಕೆಂಬ ಆಸೆ. ನನಗೆ ಓದು ಹಾಗೂ ನಟನೆ ಎರಡು ಆಸೆ. ಓದಿನಲ್ಲೂ ನಮ್ಮ ತಂದೆ ಹೇಳಿದ ಹಾಗೆ ಕೇಳಿದ್ದೇನೆ. ಈ ಚಿತ್ರದ ಟ್ರೇಲರ್ ನೋಡಿ ನಮ್ಮ ತಂದೆ ಸಂತೋಷಪಟ್ಟಿದ್ದಾರೆ. ಜನರಿಗೂ ಚಿತ್ರ ಇಷ್ಟವಾಗಲಿದೆ’ ಎಂದರು. ನಂದೀಶ್ ಈ ಸಿನಿಮಾ ನಿರ್ದೇಶಕ. ಲೋಹಿತ್ ನಿರ್ಮಾಣ ಮಾಡಿದ್ದಾರೆ.