ಡಾಲಿ ಧನಂಜಯ್ ಹೊಸ ವರ್ಷದ ಆರಂಭದಲ್ಲೇ ಸಿಹಿ ಸುದ್ದಿಕೊಟ್ಟಿದ್ದಾರೆ. ಸದ್ಯದಲ್ಲೇ ಬದುಕಿಗೆ ಇನ್ನೊಂದು ಜೀವ ಜೊತೆಯಾಗಲಿದೆ ಎನ್ನುವ ಮೂಲಕ ತಾನು ತಂದೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಸಿನಿವಾರ್ತೆ
ಡಾಲಿ ಧನಂಜಯ್ ಹೊಸ ವರ್ಷದ ಆರಂಭದಲ್ಲೇ ಸಿಹಿ ಸುದ್ದಿಕೊಟ್ಟಿದ್ದಾರೆ. ಸದ್ಯದಲ್ಲೇ ಬದುಕಿಗೆ ಇನ್ನೊಂದು ಜೀವ ಜೊತೆಯಾಗಲಿದೆ ಎನ್ನುವ ಮೂಲಕ ತಾನು ತಂದೆಯಾಗುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಗುಲಾಬಿ ಹೂಗಳನ್ನು ಸ್ವೀಕರಿಸಿ ಗುಡ್‌ನ್ಯೂಸ್ ಹೇಳಿದ ಡಾಲಿ
ಖಾಸಗಿ ವಾಹಿನಿ ಕಾರ್ಯಕ್ರಮದಲ್ಲಿ ಎರಡು ಗುಲಾಬಿ ಹೂಗಳನ್ನು ಸ್ವೀಕರಿಸಿ ಗುಡ್‌ನ್ಯೂಸ್ ಹೇಳಿದ ಡಾಲಿ, ‘ಈ ಎರಡು ಗುಲಾಬಿಗಳಲ್ಲಿ ಒಂದನ್ನು ನನ್ನ ಹೆಂಡ್ತಿಗೆ ಕೊಡ್ತೀನಿ, ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗ್ತಿದೆ, ಇನ್ನೊಂದು ಗುಲಾಬಿ ಆ ಜೀವಕ್ಕೋಸ್ಕರ’ ಎಂದಿದ್ದು ಟ್ರೆಂಡ್ ಆಗಿದೆ.
ಫೆಬ್ರವರಿ 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ
ಕಳೆದ ವರ್ಷ ಫೆಬ್ರವರಿ 16ರಂದು ಮೈಸೂರಿನಲ್ಲಿ ಧನಂಜಯ ಹಾಗೂ ಡಾ ಧನ್ಯತಾ ಗಾಂವ್ಕರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.