ಸಾರಾಂಶ
ಮೈಸೂರು ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಸಂಕ್ರಾಂತಿ ಆಚರಣೆ
ಕನ್ನಡಪ್ರಭ ಸಿನಿವಾರ್ತೆ
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದರ್ಶನ್ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಸಂಕ್ರಾಂತಿ ಆಚರಣೆ ಮಾಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಸಾಕುಪ್ರಾಣಿಗಳ ಜೊತೆಗಿರುವ ಫೋಟೋವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ದರ್ಶನ್ ಪ್ರತೀ ವರ್ಷವೂ ಸಂಕ್ರಾಂತಿ ಹಬ್ಬವನ್ನು ಫಾರ್ಮ್ ಹೌಸ್‌ನಲ್ಲಿ ಆಚರಿಸುವುದು ರೂಢಿ. ಇಲ್ಲಿ ಎತ್ತು, ಹಸು, ಕುದುರೆಗಳಿಗೆ ಸ್ನಾನ ಮಾಡಿಸಿ ಬೆಂಕಿ ಹಾಯಿಸುತ್ತಾರೆ. ಈ ಬಾರಿಯೂ ಸಂಕ್ರಾಂತಿ ಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿದ್ದಾರೆ.