ಅಕ್ಟೋಬರ್‌ನಲ್ಲಿ ದರ್ಶನ್ ಸಿನಿಮಾ ಡೆವಿಲ್ ರಿಲೀಸ್

| Published : Apr 06 2024, 12:46 AM IST / Updated: Apr 06 2024, 06:23 AM IST

ಸಾರಾಂಶ

ಅಕ್ಟೋಬರ್‌ನಲ್ಲಿ ದರ್ಶನ್ ನಟನೆಯ ಸಿನಿಮಾ ಡೆವಿಲ್ ರಿಲೀಸ್ ಆಗಲಿದೆ. ಆ ಕುರಿತು ದರ್ಶನ್ ಮಾಹಿತಿ ನೀಡಿದ್ದಾರೆ.

  ಸಿನಿವಾರ್ತೆ

ದರ್ಶನ್‌ ನಟನೆಯ, ‘ಮಿಲನ’ ಖ್ಯಾತಿಯ ನಿರ್ದೇಶಕ ಪ್ರಕಾಶ್‌ ಜಯರಾಮ್‌ ನಿರ್ದೇಶನದ ‘ಡೆವಿಲ್‌’ ಸಿನಿಮಾ ಅಕ್ಟೋಬರ್‌ನಲ್ಲಿ ರಿಲೀಸ್‌ ಆಗಲಿದೆ. ಈ ವಿಚಾರವನ್ನು ಖುದ್ದು ದರ್ಶನ್‌ ಅವರೇ ತಿಳಿಸಿದ್ದಾರೆ.

ಹಲವು ದಿನಗಳ ಕೆಳಗೆ ‘ಡೆವಿಲ್’ ಚಿತ್ರದ ಆ್ಯಕ್ಷನ್ ಚಿತ್ರೀಕರಣ ಶುರುವಾಗಿತ್ತು. ಆದರೆ ಆ ಸಂದರ್ಭದಲ್ಲಿ ದರ್ಶನ್‌ ಅವರ ಕೈಗೆ ಆಕಸ್ಮಿಕವಾಗಿ ಏಟಾಗಿತ್ತು ಎನ್ನಲಾಗಿದೆ. ಇತ್ತೀಚೆಗೆ ಒಂದೆರಡು ಕಾರ್ಯಕ್ರಮಗಳಲ್ಲಿ ದರ್ಶನ್‌ ಅವರು ಕೈಗೆ ಬ್ಯಾಂಡೇಜ್‌ ಹಾಕಿಕೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ್ದ ಅವರು, ‘ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಮುಂದಿನವಾರವೇ ಡೆವಿಲ್‌ ಚಿತ್ರೀಕರಣ ಶುರು ಮಾಡಬೇಕು. ಪ್ರಾಮಿಸ್ ಮಾಡಿದಂತೆ ಅಕ್ಟೋಬರ್‌ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಿದೆ’ ಎಂದು ಹೇಳಿದ್ದರು.

ಆ ಪ್ರಕಾರವೇ ದರ್ಶನ್‌ ಕೈಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಮುಂದಿನವಾರದ ಹೊತ್ತಿಗೆ ಸಿದ್ಧರಾಗಿ ಚಿತ್ರೀಕರಣಕ್ಕೆ ತೆರಳಬಹುದು. ಅಕ್ಟೋಬರ್‌ನಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧರಾಗಬಹುದು. ‘ಡೆವಿಲ್‌’ ಹೊರತಾಗಿ ದರ್ಶನ್‌ ಕೈಯಲ್ಲಿ ಪ್ರೇಮ್‌ ಮತ್ತು ತರುಣ್‌ ಸುಧೀರ್‌ ನಿರ್ದೇಶನದ ಎರಡು ಸಿನಿಮಾಗಳು ಇವೆ.